ಟೀಂ ಇಂಡಿಯಾದ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತೊಂದು ಮೈಲುಗಲ್ಲು ಮುಟ್ಟಿದ್ದಾರೆ. ಕಿವೀಸ್ ವಿರುದ್ಧ ಹ್ಯಾಮಿಲ್ಟನ್ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಈ ಡ್ಯಾಶಿಂಗ್ ಓಪನರ್ ಹೊಸ ದಾಖಲೆಯೊಂದನ್ನ ಬರೆದಿದ್ದಾರೆ.
ಹಿಟ್ಮ್ಯಾನ್ ರೋಹಿತ್ ಶರ್ಮಾ ಸೀಮಿತ ಓವರ್ಗಳಿಗೆ ಹೇಳಿ ಮಾಡಿಸಿದ ಆಟಗಾರ. ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ನಂತರ ಓಪನಿಂಗ್ ಸ್ಲಾಟ್ನಲ್ಲಿ ಮಿಂಚಿದ ಬ್ಯಾಟ್ಸ್ಮನ್ ಅಂದ್ರೆ ಅದು ಔಟಿe ಂಟಿಜ ಔಟಿಟಥಿ ರೋಹಿತ್ ಶರ್ಮಾ.
2007ರಲ್ಲಿ ಐರ್ಲೆಂಡ್ ವಿರುದ್ಧ ಡೆಬ್ಯೂ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರೋಹಿತ್ ಸೋಮಾರಿಯಾಗಿದ್ರು. ಇದರ ಪರಿಣಾಮವೇ ತಂಡದಿಂದ ಆಗಾ ಗೇಟ್ ಪಾಸ್ ಪಡೆಯುತ್ತಿದ್ರು. ರೋಹಿತ್ 2012 ರವರೆಗೂ ರೋಹಿತ್ 86 ಪಂದ್ಯಗಳಿಂದ ಗಳಿಸಿದ್ದು ಕೇವಲ 1,978 ರನ್ ಗಳಿಸಿದ್ರು. ತಮ್ಮ ಸೋಮಾರಿತನದಿಂದಾಗಿ ರೋಹಿತ್ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ಕೊನೆಗೆ ತಮ್ಮ ಕ್ರಿಕೆಟ್ ಬದುಕನ್ನ ಅಂತ್ಯಗೊಳಿಸುವತ್ತ ಹಾದಿ ಹಿಡಿದಿದ್ರು.
ರೋಹಿತ್ ಹಣೆಬರಹ ಬದಲಿಸಿದ ರಾಂಚಿ ಱಂಬೊ ಧೋನಿ
ಸೋಮಾರಿಯಾಗಿ ಕ್ರಿಕೆಟ್ ಆಡುತ್ತಿದ್ದ ರೋಹಿತ್ ಶರ್ಮಾ ಅವರ ಹಣೆ ಬರಹ ಬದಲಿಸಿದ್ದು ರಾಂಚಿ ಱಂಬೊ ಎಂ.ಎಸ್.ಧೋನಿ. ಮಿಸ್ಟರ್ ಕೂಲ್ ಧೋನಿ ನಾಯಕನಾಗಿ ಬಂದ ಮೇಲೆ ತಂಡಕ್ಕೆ ಮೇಜರ್ ಸರ್ಜರಿ ಮಾಡಿದ್ರು. ಇದರಲ್ಲಿ ರೋಹಿತ್ ಸ್ಲಾಟ್ ಕೂಡ ಒಂದಾಗಿತ್ತು.
2013ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಿಸ್ಟರ್ ಕೂಲ್ ಧೋನಿ ರೋಹಿತ್ಗೆ ಇನ್ನಿಂಗ್ಸ್ ಆರಂಭಸುವಂತೆ ಸಲಹೆ ಕೊಟ್ರು. ಇದು ಹಿಟ್ಮ್ಯಾನ್ ರೋಹಿತ್ ಅವರ ಅಚಿಡಿಡಿeಡಿ ಅನ್ನೆ ಬದಲಿಸಿಬಿಡ್ತು. ಚಂಢಿಗಢ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಬಾರಿಗೆ ಓಪನರ್ರಾಗಿ ಕಣಕ್ಕಿಳಿದ ರೋಹಿತ್ 83 ಎಸೆತದಲ್ಲಿ 93 ರನ್ ಬಾರಿಸಿ ಇಂಪ್ರೆಸ್ ಮಾಡಿದ್ರು. ಇದಾದ ನಂತರ ಹಿಟ್ಮ್ಯಾನ್ ಹಿಂತಿರುಗಿ ನೋಲಡಿಲ್ಲ. ನಂತರ ಓಪನಿಂಗ್ ಸ್ಲಾಟ್ನಲ್ಲಿ ವೀರಾ ವೇಶದ ಬ್ಯಾಟಿಂಗ್ ಮಾಡಿ ವಿಶ್ವ ಕ್ರಿಕೆಟ್ನಲ್ಲಿ ಡೇಂಜರಸ್ ಬ್ಯಾಟ್ಸ್ ಮನ್ನ್ನಾಗಿ ಗುರುತಿಸಿಕೊಂಡ್ರು. ವಿಶ್ವದ ಬೆಸ್ಟ್ ಓಪನರ್ ಎಂಬ ಹಿರಿಮೆಗೂ ಪಾತ್ರರಾದ್ರು. ಇದರ ಬಗ್ಗೆ ಸ್ವತಃ ರೋಹಿತ್ ಶರ್ಮಾ ಅವರೇ ಹೇಳಿಕೊಂಡಿದ್ದಾರೆ.
ಏಕದಿನ ಫಾರ್ಮೆಟ್ನಲ್ಲಿ ನಾನು ಓಪನರ್ರಾಗಿ ಕಣಕ್ಕಿಳಿದ ನಿರ್ಧಾರ ನನ್ನ ವೃತ್ತಿ ಜೀವನವೇ ಬದಲಾಗುವಂತೆ ಮಾಡಿತು. ಈ ನಿರ್ಧಾರ ತೆಗೆದುಕೊಂಡಿದ್ದು ಎಂ.ಎಸ್. ಧೋನಿ . ಇದಾದ ನಂತರ ನಾನು ಒಳ್ಳೆಯ ಬ್ಯಾಟ್ಸ್ಮನ್ ಆಗಿ ಗೇಮ್ ನ್ನ ಅರ್ಥ ಮಾಡಿಕೊಳ್ಳಲು ನೆರವಾಯಿತು. ಸಂದರ್ಭಗಳನ್ನ ಇನ್ನಷ್ಟು ಚೆನ್ನಾಗಿ ಪ್ರತಿಕ್ರಿಯೆ ಕೊಡಲು ಕಲಿತೆ ಸ್ವತಃ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.
200ನೇ ಏಕದಿನ ಪಂದ್ಯ ಆಡುತ್ತಿದ್ದಾರೆ ಮುಂಬೈಕರ್
ಸದ್ಯ ಕಿವೀಸ್ ವಿರುದ್ಧ ಹ್ಯಾಮಿಲ್ಟನ್ ಅಂಗಳದಲ್ಲಿ ನಾಲ್ಕನೆ ಏಕದಿನ ಪಂದ್ಯ ಆಡುವ ಮೂಲಕ ರೋಹಿತ್ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 200ನೇ ಏಕದಿನ ಪಂದ್ಯ ಆಡುತ್ತಿದ್ದಾರೆ. ಜೊತೆಗೆ ನಾಯಕನಾಗಿ ಪಂದ್ಯವನ್ನ ಮುನ್ನಡೆಸುತ್ತಿರೋದ್ರಿಂದ ರೋಹಿತ್ ಶರ್ಮಾಗೆ ಈ ಪಂದ್ಯ ಅವಿಸ್ಮರಣಿಯವಾಗಿದೆ.