ವಾಷಿಂಗ್ಟನ್: ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸಿದ್ದ ಸುಮಾರು 600 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಎಲ್ಲಾ ವಿದ್ಯಾರ್ಥಿಗಳು ವಲಸೆ ಕಾಯ್ದೆಯನ್ನು ಉಲ್ಲಂಘಿಸಿ ಅಮೆರಿಕಾದಲ್ಲಿ ಅಕ್ರಮವಾಗಿ ವಾಸವಾಗಿದ್ದರು ಎನ್ನಲಾಗಿದೆ. ಅಮೆರಿಕನ್ ತೆಲುಗು ಅಸೋಸಿಯೇಶನ್ ಮಾಹಿತಿ ಪ್ರಕಾರ, ಅಮೆರಿಕದ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ ಫೋರ್ಸ್ ಮೆಂಟ್ ಏಜೆನ್ಸಿ ಜಂಟಿ ದಾಳಿಯಲ್ಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ.
ಫಾರ್ಮಿಗ್ಟಂನ್ ಹಿಲ್ಸ್ ಪ್ರದೇಶದಲ್ಲಿ ನಕಲಿ ಯೂನಿರ್ವಸಿಟಿಯನ್ನು ಸ್ಥಾಪಿಸಿ ವಿದೇಶಿ ವಿದ್ಯಾರ್ಥಿಗಳು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ವಾಸ್ತವ್ಯ ಹೂಡುವಂತೆ ಮಾಡಿದೆ ಎಂದು ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ ಫೇಸ್ ಬುಕ್ ಪೋಸ್ಟ್ ಆರೋಪಿಸಿದೆ. ಏತನ್ಮಧ್ಯೆ ಈ ಯೂನಿರ್ವಸಿಟಿ ನಕಲಿಯಲ್ಲ, ಅಮೆರಿಕದ ಕಾನೂನು ಪ್ರಕಾರವೇ ಸ್ಥಾಪನೆಗೊಂಡಿದೆ ಎಂದು ಅಮೆರಿಕದಲ್ಲಿರುವ ತೆಲುಗು ಅಸೋಸಿಯೇಶನ್ ಪ್ರತಿಕ್ರಿಯೆ ನೀಡಿದೆ.
600 Indian students held in US for immigration rules violation