ಮೊನ್ನೆ ನಡೆದ ಕರ್ನಾಟಕ ಮತ್ತು ಸೌರಾಷ್ಟ್ರ ನಡುವಿನ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು.
ಸೌರಾಷ್ಟ್ರ ತಂಡದ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ಎರಡು ಇನ್ನಿಂಗ್ಸ್‍ಗಳಲ್ಲಿ ಔಟ್ ಆದ್ರು. ಅಂಪೈರ್‍ಗಳ ಕಳ್ಳಾಟದಿಂದ ಬಚವ್ ಆದ್ರು.
ಎರಡನೇ ಇನ್ನಿಂಗ್ಸ್‍ನಲ್ಲಿ ಚೇತೇಶ್ವರ ಪೂಜಾರ ಅಜೇಯ 131 ರನ್‍ಗಳನ್ನ ಬಾರಿಸುವ ಮೂಲಕ ಸೌರಾಷ್ಟ್ರ ತಂಡ 5 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತು.
ಮೊನ್ನೆ ಚಿನ್ನಸ್ವಾಮಿ ಅಂಗಳ ಕಡಿಮೆ ಮೊತ್ತ ದಾಖಲಿಸುವ ಪಿಚ್ ಆಗಿತ್ತು. ಇದರ ಜೊತೆಗೆ ಅಂಪೈರ್‍ಗಳ ಕೆಟ್ಟ ತೀರ್ಪುಗಳು ಆತಿಥೇಯರಿಗೆ ಮುಳುವಾಯಿತು. ಮೊದಲ ಇನ್ನಿಂಗ್ಸ್‍ನಲ್ಲಿ ಚೆಂಡು ಪೂಜಾರ ಅವರ ಗ್ಲೌಸ್ ತಾಗಿ ನೇರವಾಗಿ ವಿಕೆಟ್ ಕೀಪರ್ ಶರತ್ ಕೈಸೇರಿತ್ತು. ಇದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಶಬ್ದ ಕೇಳಿತ್ತು. ನಂತರ ಎರಡನೇ ಇನ್ನಿಂಗ್ಸ್‍ನಲ್ಲಿ ವಿನಯ್ ಕುಮಾರ್ ಎಸೆತದಲ್ಲಿ ಪೂಜಾರ ಮತ್ತೆ ವಿಕೆಟ್ ಕೀಪರ್‍ಗೆ ಕ್ಯಾಚ್ ನೀಡಿದ್ರು. ಅಂಪೈಯರ್ ಮಾತ್ರ ಔಟೆಂದು ತೀರ್ಪೆಂದು ಕೊಡಲಿಲ್ಲ.
ಅಂಪೈಯರ್ ಮಾಡಿದ ತಪ್ಪಿಗೆ ಕರ್ನಾಟಕ ತಂಡ ಸೋಲಬೇಕಾಯಿತು. ಇದೀಗ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನಾದ್ಕಟ್,ದೇಸಿ ಟೂರ್ನಿಗಳಲ್ಲಿ ತಂತ್ರಜ್ಞಾನ ಬಳಸುವುದು ಒಳ್ಳೆಯದು. ನಾವೀಗ ಈ ವ್ಯವಸ್ಥೆಯನ್ನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನೋಡಿದ್ದೇವೆ. ನಿರ್ಧಾರ ತಗೆದುಕೊಳ್ಳಲು ಸಹಾಯಮಾಡತ್ತದೆ.ಇದನ್ ಬಿಸಿಸಿಐ ಗಮನಿಸಬೇಕಿದೆ ಎಂದಿದ್ದಾರೆ.