ಬೆಂಗಳೂರು, ಜ.29- ಮಾದಕ ವಸ್ತು ಓಫಿಮು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ರಾಜಸ್ತಾನದವನಾದ ಎಚ್ಎಸ್ಆರ್ ಲೇಔಟ್ ವಾಸಿ ಶ್ಯಾಮ್ಲಾಲ್(40) ಬಂಧಿತ ಆರೋಪಿ.
ಬಂಧಿತನಿಂದ 52 ಸಾವಿರ ರೂ. ಬೆಲೆಯ 750 ಗ್ರಾಂ ತೂಕದ ಓಫಿಮು ಮಾದಕ ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಶಾಮ್ಲಾಲ್ ರಸ್ತೆಯಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಾ ತನ್ನ ಬಳಿಗೆ ಬರುತ್ತಿದ್ದ ಗಿರಾಕಿಗಳು ಹಾಗೂ ವಿದ್ಯಾರ್ಥಿಗಳಿಗೆ ದ್ರವರೂಪದ ಓಫಿಮು ಪದಾರ್ಥವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಬೆಳ್ಳಂದೂರು ಠಾಣೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಆರೋಪಿ ಶ್ಯಾಮ್ಲಾಲ್ ಕೈನಲ್ಲಿ ಪ್ಲಾಸ್ಟಿಕ್ ಚೀಲ ಇಟ್ಟುಕೊಂಡು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದುದ್ದನ್ನು ಕಂಡು ಆತನನ್ನು ವಿಚಾರಿಸಿದ್ದಾರೆ. ಆಗ ಆತನ ಬಳಿ ಓಫಿಮು ಇದ್ದುದು ಗೊತ್ತಾಗಿದೆ.
ತಕ್ಷಣ ಬೆಳ್ಳಂದೂರು ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.