ವಿವಾಹ ಸಮಾರಂಭಕ್ಕೆ ರೋಡ್ ರೋಲರ್ನಲ್ಲಿ ಆಗಮಿಸಿದ ವರ

ನಾಡಿಯಾ (ಪ.ಬಂ.), ಜ.28- ಮಧುಮಗ ಸಾಮಾನ್ಯವಾಗಿ ಕಾರು, ಕುದುರೆ ಅಥವಾ ಸಾರೋಟಿನಲ್ಲಿ ವಿವಾಹ ಸಮಾರಂಭಕ್ಕೆ ಆಗಮಿಸುವುದು ಸಾಮಾನ್ಯ. ಆದರೆ, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ವರನೊಬ್ಬ ರೋಡ್ ರೋಲರ್‍ನಲ್ಲಿ ಆಗಮಿಸಿ ಎಲ್ಲರನ್ನೂ ಚಕಿತಗೊಳಿಸಿದ..!

ಅಕ್ಕಸಾಲಿಗನ ಮಗನಾದ 30 ವರ್ಷದ ಅರ್ಕಾಪಾತ್ರ ರೋಡ್ ರೋಲರ್ ಮಧುಮಗ ಎಂದೇ ನಾಡಿಯಾ ಜಿಲ್ಲೆಯಲ್ಲಿ ಈಗ ಚಿರಪರಿಚಿತನಾಗಿದ್ದಾನೆ.

ಮಧುಮಗಳ ಮನೆಯಲ್ಲಿ ವಿವಾಹಕ್ಕಾಗಿ ಅದ್ಧೂರಿ ಸಿದ್ಧತೆ ನಡೆದಿತ್ತು. ವರ ಕಾರಿನಲ್ಲೋ ಅಥವಾ ಕುದುರೆ ಮೇಲೋ ಬರಬಹುದು ಎಂದು ಎಲ್ಲರೂ ಎದುರು ನೋಡುತ್ತಿದ್ದರು. ಆದರೆ, ಇದೇ ಸಮಯದಲ್ಲಿ ನಿವಾಸದ ಮುಂದೆ ರೋಡ್ ರೋಲರ್ ಆಗಮಿಸಿತು. ಅದರಿಂದ ಇಳಿದ ಅರ್ಕಾಪಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದ.
ಮಧುಮಗ ಕಾರು, ಕುದುರೆ ಅಥವಾ ಸಾರೋಟ್ ಮೂಲಕ ಬರುತ್ತಾರೆ. ಆದರೆ ನಾನು ನನ್ನ ವಿವಾಹ ಸಮಾರಂಭವನ್ನು ಸ್ಮರಣೀಯ ಮತ್ತು ವಿಭಿನ್ನವಾಗಿ ಆಚರಿಸಲು ರೋಡ್ ರೋಲರ್ ಪರಿಕಲ್ಪನೆ ಕಾರ್ಯಗತಗೊಳಿಸಿದ್ದೇನೆ ಎಂದು ಈತ ಹೇಳಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ