ಉತ್ತರಪ್ರದೇಶದಲ್ಲಿ ಉತ್ತಮ ವಾತಾವರಣ ಮೂಡಲು ಯೋಗಿ ಆದಿತ್ಯನಾಥ್ ಕಾರಣ:ಮಾಜಿ ಉಪಮುಖ್ಯಮಂತ್ರಿ ಆರ್.ಆಶೋಕ್

ಬೆಂಗಳೂರು,ಜ.28-ಯಾವುದೇ ಸನ್ಯಾಸಿ ರಾಜಕಾರಣಕ್ಕೆ ಬಂದು ಏನೆಲ್ಲ ಸಾಧನೆಗಳನ್ನು ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ ಸ್ಕ್ವೇರ್ ಬುಕ್ಸ್ ಮಳಿಗೆಯು ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಚಂದ್ರಶೇಖರ್ ಅವರ ಅನುವಾದಿತ ಮೋದಿ ಮೆಚ್ಚಿದ ಯೋಗಿ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಉತ್ತರಪ್ರದೇಶದಲ್ಲಿ ಇಂದು ಉತ್ತಮ ವಾತಾವರಣ ಇರಲು ಯೋಗಿ ಆದಿತ್ಯ ನಾಥ್‍ರು ಕಾರಣ.ಅವರು ತಂದ ಕಾರ್ಯಕ್ರಮಗಳು ಮತ್ತು ಕಾನೂನುಗಳು ಮಾದರಿಯಾಗಿದೆ. ಸನ್ಯಾಸಿಯಾದವರು ರಾಜಕಾರಣಕ್ಕೆ ಬಂದು ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದು ತಪ್ಪು ಕಲ್ಪನೆ. ವಿದ್ಯೆ, ಅನ್ನದಾನ,  ಜತೆಗೆ ರಾಜಕೀಯದಲ್ಲಿ ತೊಡಗಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

ಯದುಗಿರಿ ಯತಿರಾಜ ಮಠದ ರಾಮಾನುಜ ಜೀಯರ್ ಮಾತನಾಡಿ, ಮನುಕುಲಕ್ಕೆ ಯಾವುದಾದರೊಂದು ಉತ್ತಮ ಸಂದೇಶ ನೀಡುವವರು ಸನ್ಯಾಸಿಗಳು. ಸನ್ಯಾಸಿಗಳು ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಮನುಕುಲಕ್ಕೆ ಹತ್ತಿರದವರು.ಸಮಾಜದ ಒಳತಿಗೆ ಶ್ರಮಿಸುವಂತಹವರು.ಸಮಾಜದ ಬದಲಾವಣೆಗೆ ಸನ್ಯಾಸಿಗಳು ಶ್ರಮಿಸುತ್ತಿದ್ದಾರೆ.ಈ ದೇಶದ ಬೆಳವಣಿಗೆಗೆ ಮಠಗಳ ಕೊಡುಗೆ ಅಮೋಘ.ಮೋದಿ ಅವರು ಯೋಗಿ ಅವರನ್ನು ಮೆಚ್ಚಿರುವುದು ನಮ್ಮಂತಹ ಸನ್ಯಾಸಿಗಳಿಗೆ ಸಲ್ಲಿದ ಗೌರವ ಎಂದು ಹೇಳಿದರು.

ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಠ್ಯಾಗೂರ್ ಮಾತನಾಡಿ, ಮಾನವ ಧರ್ಮದ ಪ್ರತೀಕನಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಹೊರೆತು ಯಾವುದೇ ರಾಜಕೀಯ ಪಕ್ಷದ ಪರವಲ್ಲ. ಮಾನವ ಧರ್ಮವನ್ನು ಪುಸ್ತಕದಲ್ಲಿ ತರ್ಜುಮೆ ಮಾಡಲಾಗಿದೆ. ಇಉ ಪುಸ್ತಕದಲ್ಲಿ ಯೋಗಿ ಆದಿತ್ಯ ನಾಥ್ ಅವರ ವಾಗ್ದಾನ ಗಳನ್ನು ಕಾಣಬಹುದಾಗಿದೆ. ಅಂದರೆ ಯಾರಿಗೆ ಊಟ ಇಲ್ಲವೋ ಅವರಿಗೆ ಒಂದೊತ್ತಿನ ಊಟ, ಊಟ ಮಾಡಿದವರಿಗೆ ವಸತಿ ಇಲ್ಲದವರಿಗೆ ಆಶ್ರಯ.ಹಾಗೆಯೇ ಇವರು ಸಮಾಜದ ಬದಲಾವಣೆಗೆ ಕೈಗೊಳ್ಳಬೆಡಕಾದ ಯೋಜನೆಗಳ ಬಗ್ಗೆ ತುಂಬಾ ವಿಸ್ತಾರವಾಗಿ ಬಣ್ಣಿಸಿದ್ದಾರೆ. ಹಾಗೇಯೆ ಜನರ ಒಳತಿಗೆ ಮತ್ತು ಯೋಗಕ್ಷೇಮಕ್ಕೆ ನಾನು ಮಾಡಬೇಕಾದ ಕೆಲಸಗಳೇನು ಎಂಬುದನ್ನು ಮೋದಿ ಮೆಚ್ಚಿದ ಯೋಗಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಮಾತನಾಡಿ, ಪುಸ್ತಕಗಳು ಒಂದಿ ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತಲುಪುವಂತಾಗಬೇಕು. ಮೋದಿ ಮೆಚ್ಚಿದ ಯೋಗಿ ಪುಸ್ತಕಗಳು ಯುವ ಸಮುದಾಯಕ್ಕೆ ಹತ್ತಿರವಾದುದು.ಒಂದು ರಾಷ್ಟ್ರದ ಸಂಸ್ಕೃತಿಯನ್ಮು ಪರಿಚಯಿಸಲು ಪುಸ್ತಕಗಳ ಅವಶ್ಯಕತೆ ಇದೆ. ಆದ್ದರಿಂದ ಪುಸ್ತಕಗಳನ್ನು ಓದುವ ಹವ್ಯಾಸ ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ