ಲಖನೌ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಶೀಘ್ರವೇ ಪ್ರಕಟಿಸಬೇಕು. ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಒಂದು ವೇಳೆ ತೀರ್ಪು ನೀಡಲು ಆಗದಿದ್ದರೆ, ಪ್ರಕರಣವನ್ನು ನಮಗೊಪ್ಪಿಸಿ, ರಾಮ ಜನ್ಮಭೂಮಿಯ ವಿವಾದವನ್ನು ಕೇವಲ 24 ಗಂಟೆಗಳಲ್ಲಿ ಇತ್ಯರ್ಥಪಡಿಸುತ್ತೇವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್, ತೀರ್ಪು ನೀಡಲು ಅನಗತ್ಯವಾಗಿ ವಿಳಂಬ ಮಾಡಿದ್ದಲ್ಲಿ ಕೋರ್ಟ್ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದರು.
ಜನರು ನಂಬಿಕೆಯ ಸಂಕೇತವಾಗಿರುವ ರಾಮ ಜನ್ಮಭೂಮಿಯ ವಿವಾದವನ್ನು ಶೀಘ್ರವಾಗಿ ಬಗೆಹರಿಸಿ ಲಕ್ಷಾಂತರ ಜನರಿಗೆ ನ್ಯಾಯ ಒದಗಿಸಿಕೊಡಲಿ ಎಂಬ ವಿಶ್ವಾಸದೊಂದಿಗೆ ನಾವು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆವು, ಈಗ ನ್ಯಾಯಾಲಯದ ವಿಳಂಬ ಧೋರಣೆಯಿಂದ ಜನರ ತಾಳ್ಮೆ, ನಂಬಿಕೆಯಲ್ಲಿ ಬಿರುಕು ಮೂಡುವಂತಾಗಿದೆ ಎಂದು ಗುಡುಗಿದರು.
ಕೋರ್ಟ್ ಗೆ ತೀರ್ಪು ನೀಡಲು ಸಾಧ್ಯವಿಲ್ಲವಾದಲ್ಲಿ ಪ್ರಕರಣವನ್ನು ನಮಗೊಪ್ಪಿಸಲಿ. ನಾವು 24 ಗಂಟೆಗಳಲ್ಲಿ ಇತ್ಯರ್ಥಪಡಿಸುತ್ತೇವೆ ಎಂದು ಹೇಳಿದ್ದಾರೆ.
Give Us Ram Temple Case, Can Solve It In 24 Hours, Says Yogi Adityanath