ಪ್ರಿಯಾಂಕಾ ಗಾಂಧಿ ಬೈಪೋಲಾರ್​ ಡಿಸಾರ್ಡರ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದ ಬಿಜೆಪಿ ಮುಖಂಡ ಸುಬ್ರಹ್ಮಣಿಯನ್​ ಸ್ವಾಮಿ

ನವದೆಹಲಿ: ಸದಾ ಒಂದಿಲ್ಲೊಖ್ಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತ ಗಮನಸೆಳೆಯುತ್ತಿರುವ ಬಿಜೆಪಿ ಸಂಸದ ಸುಬ್ರಹ್ಮಣಿಯನ್​ ಸ್ವಾಮಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೈಪೋಲಾರ್​ ಡಿಸಾರ್ಡರ್​ (ಮಾನಸಿಕ ಕಾಯಿಲೆ)ಯಿಂದ ಬಳಲುತ್ತಿದ್ದಾರೆ ಎಂದು ಸುಬ್ರಹ್ಮಣಿಯನ್​ ಸ್ವಾಮಿ ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ಮರಳಿರುವ ಪ್ರಿಯಾಂಕಾ ಗಾಂಧಿ ಕುರಿತು ಮಾತನಾಡಿರುವ ಸ್ವಾಮಿ, ಪ್ರಿಯಾಂಕಾ ದ್ವಿಧ್ರುವೀಯ ಎಂಬ ಖಿನ್ನತೆಯ ರೋಗದಿಂದ ಬಳಲುತ್ತಿದ್ದಾರೆ. ಇಂದರಿಂದಾಗಿ ಅವರು ಜನರನ್ನು ಹೊಡೆಯುತ್ತಾರೆ. ಈ ರೋಗದಿಂದಾಗಿ ಅವರು ಸಾಮಾನ್ಯ ಜೀವನ ನಡೆಸಲು ಆಗುತ್ತಿಲ್ಲ. ಆಕೆ ತನ್ನ ಮನಸ್ಥಿತಿಯ ಸಮತೋಲನ ಕಳೆದುಕೊಂಡಿದ್ದಾರೆ ಎಂಬುದನ್ನು ಸಾರ್ವಜನಿಕರು ತಿಳಿದಿರಬೇಕು ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಜ.23ರಂದು ಉತ್ತರಪ್ರದೇಶ ಪೂರ್ವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

Priyanka Gandhi suffers from bipolar disorder and beats up people, alleges Subramanian Swamy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ