ಕಡಿಮೆ ಅಪಾಯಕಾರಿಯಿರುವ ಅಭ್ಯಥಿಗೆ ಮತ ನೀಡಿ; ರಾಜ್ಯಪಲ ವಜೂಭಾಯಿವಾಲ

ಬೆಂಗಳೂರು,ಜ.25- ರಾಷ್ಟ್ರ ವಿಕಾಸಕ್ಕೆ ಯಾರು ಹೆಚ್ಚಿನ ಒತ್ತು ಕೊಡುತ್ತಾರೆ ಅಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಅದೇ ರೀತಿ ಜನಪ್ರತಿನಿಧಿಗಳು ಕೆಲಸ ಮಾಡದಿದ್ದಾಗ ಪ್ರಶ್ನಿಸಬೇಕು ಎಂದು ರಾಜ್ಯಪಾಲ ವಜೂಭಾಯಿವಾಲಾ ಇಂದಿಲ್ಲಿ ಕರೆ ನೀಡಿದರು.

ನಾವು ದೇಶಕ್ಕಾಗಿ ಮತದಾನ ಮಾಡುತ್ತಿದ್ದೇವೆ ಎಂಬ ಪ್ರಜ್ಞೆ ಇರಲಿ.ಯಾವ ಅಭ್ಯರ್ಥಿ ಕಡಿಮೆ ಅಪಾಯಕಾರಿಯೋ ಆತನಿಗೆ ಮತ ನೀಡಿ ಎಂದರು.

ಭಾರತ ಚುನಾವಣಾ ಆಯೋಗ ನಗರದ ಪುರಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಚುನಾವಣಾ ಆಯೋಗ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ.ಆಯೋಗ ಯಾವುದೇ ಒತ್ತಡದಿಂದ ಕೆಲಸ ಮಾಡುತ್ತಿಲ್ಲ. ಮತದಾನದ ಬಗ್ಗೆ ಅನುಮಾನ ಮೂಡಿರುವುದರಿಂದ ವಿವಿ ಪ್ಯಾಟ್ ವ್ಯವಸ್ಥೆ ಜಾರಿಗೆ ತಂದಿದೆ ಎಂದರು.

ರಾಜ್ಯದಲ್ಲಿ 5 ಕೋಟಿಗೂ ಅಧಿಕ ಮತದಾರರಿದ್ದಾರೆ. ಅದರಲ್ಲಿ 12 ಲಕ್ಷ ಕ್ಕೂ ಅಧಿಕ ಮತದಾರರು ಮೊದಲ ಬಾರಿ ಮತ ಚಲಾಯಿಸುವಂತಹವರಾಗಿದ್ದಾರೆ ಎಂದು ಹೇಳಿದರು.

ಮತದಾರರ ಪಟ್ಟಿಗೆ ಹೆಸರು ಸೇರಿಸುವುದಕ್ಕೆ ಎಷ್ಟು ಮುತುವರ್ಜಿ ವಹಿಸಲಾಗಿದೆಯೋ ಅದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಿಂದ ಹೆಸರು ತೆಗೆಯಲೂ ಕೂಡ ಕ್ರಮ ವಹಿಸಬೇಕು ಎಂಬ ಕಿವಿಮಾತು ಹೇಳಿದರು.

ಒಬ್ಬರ ಮೇಲಿನ ದ್ವೇಷದ ಮೇಲೆ ಇನ್ನೊಬ್ಬರು ಅವರ ಹೆಸರನ್ನು ತೆಗೆಯಲು ಅರ್ಜಿ ಕೊಡುತ್ತಾರೆ.ಇವೆಲ್ಲವನ್ನೂ ಮುತುವರ್ಜಿಯಿಂದ ಪರಿಶೀಲಿಸಬೇಕು. ಇಲ್ಲವಾದರೆ ಮತದಾರರಿಗೆ ಮತದಾನದ ಹಕ್ಕು ಸಿಗುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದರು.

ನಮ್ಮ ಪದ್ಧತಿಯಲ್ಲಿ ಕೆಲವು ವಿಭಿನ್ನತೆಗಳಿರಬಹುದು ಆದರೆ ದೇಶಾದ್ಯಂತ ಮತದಾನ ಒಂದೇ ರೀತಿಯಲ್ಲಿ ನಡೆಯುತ್ತದೆ ಎಂದು ಹೇಳಿದರು.
ಮತದಾರರ ಪಟ್ಟಿ ತಯಾರಿಗೆ ಬಹಳಷ್ಟು ಮಂದಿ ಕೆಲಸ ಮಾಡಿದ್ದಾರೆ. ಮತದಾನ ಮಾಡಿ ಮಾದರಿ ಮತದಾರರಾಗಿ ಎಂದ ಅವರು, ಇಂತಹದ್ದೊಂದು ದೊಡ್ಡ ಜವಾಬ್ದಾರಿ ನಿರ್ವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಮತದಾನದ ಪೊಸೆಸ್ ಸಹ ಟೆಕ್ನಾಲಜಿಯೊಂದಿಗೆ ಉತ್ತಮವಾಗಿದೆ.ಅದಕ್ಕೆ ಉತ್ತಮ ಉದಾಹರಣೆ ವಿವಿಪ್ಯಾಟ್. ಕೆಲವರು ಇವಿಎಂನಲ್ಲಿ ಫಾಲ್ಟ್ ಇದೆ ಎನ್ನುತ್ತಾರೆ.ಆದರೆ ಇವಿಎಂ ಡಿಸೈನ್ ಹಾಗೂ ಅದರ ಜವಾಬ್ದಾರಿ ಎಲೆಕ್ಷನ್ ಕಮಿಷನರ್‍ಗಳದ್ದು.ಎಲೆಕ್ಷನ್ ಕಮಿಷನರ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಎಲೆಕ್ಷನ್ ಸಮಯದಲ್ಲಿ ಕೆಲವರು ಮತದಾನ ಮಾಡಲಾಗುತ್ತಿಲ್ಲ. ಅಂತಹವರ ಹೆಸರನ್ನು ಒಂದಲ್ಲ ಎರಡು ಬಾರಿ ವೆರಿಫೈ ಮಾಡಿ. ಹೊಸ ಹೆಸರನ್ನು ಸೇರಿಸುವ ಕೆಲಸ ಸರಿಯಾಗಿ ನಡೆಯುತ್ತಿದೆ. ಆದರೆ ಕೆಲವರ ಹೆಸರನ್ನು ಕೈ ಬಿಡಲಾಗಿದೆ ಎಂಬ ದೂರುಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದರು.

ರಾಜ್ಯಕ್ಕೆ ಬೆಸ್ಟ್ ಎಲೆಕ್ಷನ್ ಪ್ರಾಕ್ಟೀಸ್ ಪ್ರಶಸ್ತಿ:
ಬೆಸ್ಟ್ ಎಲೆಕ್ಷನ್ ಪ್ರಾಕ್ಟೀಸ್-2018ರ ಪ್ರಶಸ್ತಿಗೆ ಕರ್ನಾಟಕ ಭಾಜನವಾಗಿದ್ದು, ಇಂದು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಬೂತ್ ಮಟ್ಟದಲ್ಲೂ ಮತದಾರರ ದಿನಾಚರಣೆ ಮಾಡಲಾಗುತ್ತಿದೆ ಎಂದು ಅಡಿಷನಲ್ ಸಿಇಒ ನಾಗಭೂಷಣ್ ತಿಳಿಸಿದರು.

ಮತದಾರರು ಮತದಾನದಿಂದ ಹೊರಗುಳಿಯಬಾರದು ಎಂಬುದು ಈ ವರ್ಷದ ಘೋಷಣೆಯಾಗಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಮತದಾರರನ್ನು ಮತದಾನದತ್ತ ಸೆಳೆಯಲಾಗುತ್ತಿದೆ ಎಂದರು.

ಇವಿಎಂ ಮಾದರಿ ಪ್ರದರ್ಶನ, 1945 ಡಯಲ್ ಮಾಡುವ ಮೂಲಕ ಮತದಾರರ ಲಿಸ್ಟ್ ಮಾಡಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆದಿವಾಸಿಗಳಿಗೆ, ವಿಕಲಚೇತನರಿಗೆ ಹಾಗೂ ಮೊದಲ ಬಾರಿ ವೋಟ್ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಓಟರ್ ಐಡಿ ವಿತರಣೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ