ಬೆಂಗಳೂರು, ಜ.25-ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಾಚಾರ್ಯ ಮಿಥುನ್ಶ್ಯಾಂ ಅವರ ಸಮರ್ಥ ಗರಡಿಯಲ್ಲಿ ರೂಪುಗೊಳ್ಳುತ್ತಿರುವ ಕಲಾಶಿಲ್ಪ ಪ್ರಾರ್ಥನಾ ಪ್ರೇಂ.ಬಹುಮುಖ ಪ್ರತಿಭೆಯ ಈ ಉದಯೋನ್ಮುಖ ನೃತ್ಯಕಲಾವಿದೆ ಇದೇ ತಿಂಗಳ 27ರಂದು ನಗರದ ಎ.ಡಿ.ಎ. ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾರೆ.
ಬೆಂಗಳೂರಿನ ಎಂ.ಪ್ರೇಂ ಕುಮಾರ್ ಮತ್ತು ದೀಪಾಪ್ರೇಂ ಅವರ ಪುತ್ರಿ ಪ್ರಾರ್ಥನಾ ತನ್ನ ಐದನೆಯ ವಯಸ್ಸಿಗೆ ನೃತ್ಯ ಕಲಿಕೆಯ ಬಗ್ಗೆ ಒಲವು ತೋರಿ ರೇಷ್ಮಾವೇಣುಗೋಪಾಲï ಅವರ ಬಳಿ ಭರತನಾಟ್ಯ ಕಲಿತರು. ಅನಂತರ ಗುರು ಪದ್ಮಿನಿ ರಾಮಚಂದ್ರನ್ ಬಳಿ ಕಲಿತಳು. ಪ್ರಸ್ತುತ ಕಳೆದ ಐದು ವರ್ಷಗಳಿಂದ ವೈಷ್ಣವಿ ನಾಟ್ಯ ಶಾಲೆಯಲ್ಲಿ ನೃತ್ಯ ಕಲಿಯುತ್ತಿದ್ದು, ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯಪರೀಕ್ಷೆಯಲ್ಲಿ ಉತ್ತಮಾಂಕ ಗಳಿಸಿ ತೇರ್ಗಡೆಯಾದಳು.
ವಿಬ್ಗಯಾರ್ ಶಾಲೆಯಲ್ಲಿ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವ ಪ್ರಾರ್ಥನಾ ಬ್ಯಾಸ್ಕೆಟ್ಬಾಲï ಕ್ರೀಡಾಪಟು ಕೂಡ ಆಗಿದ್ದಾರೆ. ವಿದುಷಿ ಶ್ರೀಕಲಾ ರವಿ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತುಜನಾರ್ಧನಾಚಾರ್ಯರಲ್ಲಿ ವಯೋಲಿನ್ ಚಂದ್ರಕಾಂತರಲ್ಲಿ ಕೀಬೋರ್ಡ್ ಕಲಿಯುತ್ತಿರುವುದು ಇವರ ವಿಶೇಷ.
ವೈಷ್ಣವಿ ನಾಟ್ಯಶಾಲೆಯ ಎಲ್ಲ ನೃತ್ಯರೂಪಕಗಳಲ್ಲಿ ಭಾಗವಹಿಸಿರುವ ಈಕೆ ನಾಡಿನ ಪ್ರಮುಖ ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದು, ಹೊಸೂರು ನಾಟ್ಯಾಂಜಲಿ ಟ್ರಸ್ಟ್ ನಾಟ್ಯ ಮಯೂರಿ ಬಿರುದು ನೀಡಿ ಗೌರವಿಸಿದೆ.