ಬೆಂಗಳೂರು, ಜ.24- ಕಂಠಪೂರ್ತಿ ಕುಡಿದು ಶಾಸಕರು ಗಲಾಟೆ ಮಾಡಿಕೊಂಡಿರುವುದು ತಲೆತಗ್ಗಿಸುವ ವಿಷಯವಾಗಿದೆ.ಈ ಸಂಬಂಧ ಕಾನೂನು ತನ್ನ ಕ್ರಮ ತೆಗೆದುಕೊಳ್ಳಬೇಕು ಎಂದು ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್ ಹೇಳಿದ್ದಾರೆ.
ಬಿಡದಿ ಈಗಲ್‍ಟನ್ ರೆಸಾರ್ಟ್‍ನಲ್ಲಿ ಶಾಸಕ ಆನಂದ್‍ಸಿಂಗ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳ ನಡುವೆ ಈ ರೀತಿ ಗಲಾಟೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ಗಣೇಶ್ ಅವರಿಗೆ ಯಾರೂ ರಕ್ಷಣೆ ನೀಡುತ್ತಿಲ್ಲ. ಪೊಲೀಸರು ಅವರ ಕೆಲಸವನ್ನು ಮಾಡುತ್ತಿದ್ದಾರೆ.ಕಾನೂನು ಏನು ಕ್ರಮ ಕೈಗೊಳ್ಳುತ್ತದೋ ಕೈಗೊಳ್ಳಲಿ. ಕುಡಿದ ಅಮಲಿನಲ್ಲಿ ನಿನ್ನನ್ನು ಸೋಲಿಸುತ್ತೇನೆ ಎಂದಿದ್ದಕ್ಕೆ ಪರಸ್ಪರ ಹೊಡೆದಾಟ ನಡೆದಿದೆ. ಗಲಾಟೆ ನಡೆದ ಸ್ಥಳದಲ್ಲಿ ನಾನಿರಲಿಲ್ಲ.
ಎರಡೂ ಕುಟುಂಬದವರು ಒಪ್ಪಿದರೆ ಸಂಧಾನ ನಡೆಸಬಹುದು ಎಂದು ಹೇಳಿದರು.ಇಂತಹ ಘಟನೆ ನಡೆದಿರುವುದು ಅತ್ಯಂತ ದುರದೃಷ್ಟಕರ ಎಂದು ಪ್ರತಾಪ್‍ಗೌಡ ವಿಷಾದ ವ್ಯಕ್ತಪಡಿಸಿದರು.
ರೆಸಾರ್ಟ್‍ಗೆ ಬಂದಿದ್ದು ತಪ್ಪು, ಈ ರೀತಿ ಆಗಿದ್ದೂ ತಪ್ಪು ಎಂದು ಹೇಳಿದರು.