ಬೆಂಗಳೂರು, ಜ.23- ಎರಡು ಬಾರಿ ವಿಶ್ವಕಪ್ ವಿಜೇತ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕøತ ಗೌತಮ್ ಗಂಭೀರ್ ಕ್ರೀಡಾ ತಂತ್ರe್ಞÁನ ಕಂಪನಿ ಫನ್ ಎಂಗೇಜï.ಕಾಂ ಸಹಯೋಗದಲ್ಲಿ ಎಫ್ಜಿ ಪರ್ವ ಪ್ಲೇಯರ್ ಎಂಬ ಹೆಸರಿನ ಕ್ರಿಕೆಟ್ ಶಿಷ್ಯವೇತನಕ್ಕೆ ಚಾಲನೆ ನೀಡಿದ್ದಾರೆ.
12-24ರ ವಯಸ್ಸಿನ ಬಾಲಕ ಮತ್ತು ಬಾಲಕಿಯರಿಗೆ ಮುಕ್ತವಾಗಿದ್ದು ಪೂರ್ಣ ಪಾವತಿಸಿದ ಕ್ರಿಕೆಟ್ ಡೆವಲಪ್ಮೆಂಟ್ ಸ್ಕಾಲಶಿಪ್ನೊಂದಿಗೆ ಮೂರು ವಾರಗಳ ಪೂರ್ಣ ಪಾವತಿಸಿದ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಅವಕಾಶವನ್ನು ಆಸ್ಟ್ರೇಲಿಯಾದ ಪರ್ಥ್ ಗಿಲ್ಡೋರ್ಡ್ ಗ್ರಾಮರ್ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಟು ಎಚ್.ಡಿ.ಆಕಮ್ರ್ಯಾನ್ ಅವರ ಮಾರ್ಗದರ್ಶನದಲ್ಲಿ ಪಡೆಯಲಿದ್ದಾರೆ.
ಶಿಷ್ಯವೇತನಕ್ಕೆ ಆಯ್ಕೆ ಸಂಪೂರ್ಣ ಪಾರದರ್ಶಕ, ವಿಶಿಷ್ಟ ಮತ್ತು ವೈe್ಞÁನಿಕವಾಗಿ ವಿನ್ಯಾಸಗೊಳಿಸಲಾದ ವಿಧಾನಗಳ ಮೌಲ್ಯಮಾಪನವನ್ನು ವಿನ್ಯಾಸಗೊಳಿಸಲಾಗಿದೆ.1ನೇ ಹಂತವನ್ನು ವಿಡಿಯೋ ಆಧರಿತ ಟ್ರಯಲ್ಸï ಮೂಲಕ ಮಾಡಲಾಗುತ್ತದೆ.
ಬೆಂಗಳೂರು ಟ್ರಯಲ್ಸï ಜನವರಿ 27ರಂದು ಯಲಹಂಕದ ಹೈಪರ್ ಟರ್ಫ್ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭವಾಗಲಿದೆ.ಸದ್ಯದಲ್ಲೇ ಹೆಚ್ಚು ಸ್ಥಳಗಳನ್ನು ಸೇರ್ಪಡೆ ಮಾಡಿ ಪ್ರಕಟಿಸಲಾಗುತ್ತದೆ.
ಯಾವುದೇ ಭಾರತೀಯ ಕ್ರಿಕೆಟ್ ಅಕಾಡೆಮಿಯಲ್ಲಿ 5 ವರ್ಷಗಳ ಉಚಿತ ಕ್ರಿಕೆಟ್ ತರಬೇತಿ ಉಚಿತ ಕ್ರಿಕೆಟಿಂಗ್ ಸಾಧನ ಫನ್ಎಂಗೇಜನ್ ವೆಲ್ನೆಸ್ ಪಾಲುದಾರರು ಮತ್ತು ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಬೆಂಬಲ ಮತ್ತು ಕ್ರೀಡಾ ಫಿಸಿಯೋಥೆರಪಿ ಲಭ್ಯವಾಗಲಿದೆ.
ಫನ್ಎಂಗೇಜ್.ಕಾಂನ ಸಂಸ್ಥಾಪಕ ಮತ್ತು ಸಿಇಒ ಕರಣ್ ಸಿಂಗï, ¾¾ಈ ಪ್ಲಾಟಾರಂ ಮೂಲಕ ಕ್ರಿಕೆಟಿಗರಾಗುವ ತಮ್ಮ ಕನಸನ್ನು ಈಡೇರಿಸಿಕೊಳ್ಳುವುದನ್ನು ದೃಢಪಡಿಸುತ್ತೇವೆ. ಇದು ಕ್ರಿಕೆಟರಿಗೆ ಅವರ ಕೌಶಲ್ಯಗಳನ್ನು ಹಣಕಾಸಿನ ಬಗ್ಗೆ ಆಲೋಚಿಸದೆ ಅಭಿವೃದ್ಧಿಪಡಿಸಿಕೊಳ್ಳಲು ಉಪಕ್ರಮವಾಗಿದೆ ಎಂದು ಹೇಳಿದರು.
ಟ್ರಯಲ್ಸ್ಗೆ ನೋಂದಣಿ:
ಟ್ರಯಲ್ಸ್ಗೆ ನೋಂದಣಿಯನ್ನು ವೆಬ್ಸೈಟ್ ಅಥವಾ ಫನ್ ಎಂಗೇಜ್ ಮೊಬೈಲ್ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇಸ್ರ್ಟೋ ಅಥವಾ ಆ್ಯಪ್ ಸ್ರ್ಟೋ ಮೂಲಕ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಮಾಡಿಕೊಳ್ಳಬಹುದು. ಅಲ್ಲದೆ ಬೆಂಗಳೂರಿನ ಯಲಹಂಕದಲ್ಲಿರುವ ಹೈಪರ್ ಟರ್ಫ್ ಕ್ರಿಕೆಟ್ ಗ್ರೌಂಡ್ನಲ್ಲಿ ಮತ್ತು 24/1, ಮೊದಲ ಮೇನï, ಚುಂಚಪ್ಪ ಬ್ಲಾಕ್, ಆರ್ಟಿ ನಗರ ಇಲ್ಲಿ ಕೂಡಾ ಜನವರಿ 24ರ ನಂತರ ಬೆಳಗ್ಗೆ 11ರಿಂದ 7ರ ಒಳಗಡೆ ಮಾಡಿಕೊಳ್ಳಬಹುದು.
ಬ್ಯಾಟ್ಸ್ಮೆನ್ ಮತ್ತು ಬೌಲರ್ಗಳಿಗೆ ನೋಂದಣಿ ಶುಲ್ಕ 1,050ರೂ.ಮತ್ತು ಆಲï-ರೌಂರ್ಡ ಮತ್ತು ವಿಕೆಟ್ ಕೀಪರ್ಗಳಿಗೆ 1,950ರೂ.ಇದೆ.
ಟ್ರಯಲ್ಸ್ಗೆ ವಯಸ್ಸಿನ ಗುಂಪು ಮತ್ತು ಸಮಯ
ಜ.27, 2019- 12-16 ವಯೋಮಾನದವರಿಗೆ, ಜ.28, 2019-16-19 ವಯೋಮಾನದವರಿಗೆ, ಜ.29, 2019-20-24 ವಯೋಮಾನದವರಿಗೆ, ಜ.30, 2019- ಎಲ್ಲ ವಯೋಮಾನದವರಿಗೆ ಅವರ ವಯಸ್ಸಿನ ಗುಂಪಿನ ಅನ್ವಯ.