ಮರಳಿ ಮತಪತ್ರಗಳ ಯುಗಕ್ಕೆ ಹೋಗಲು ಸಾಧ್ಯವಿಲ್ಲ: ಕೇಂದ್ರ ಚುನಾವಣಾ ಆಯುಕ್ತ ಸುನಿಲ್​ ಅರೋರಾ ಸ್ಪಷ್ಟನೆ

ನವದೆಹಲಿ: ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತಪತ್ರಗಳ ಬಳಕೆ ವಿಧಾನ ಅನುಸರಿಸುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ತಪಡಿಸಿದೆ.

ಮತಯಂತ್ರಗಳನ್ನು ತಿರುಚಲಾಗುತ್ತಿದೆ ಈ ಹಿನ್ನಲೆಯಲ್ಲಿ ಮತಪತ್ರಗಳನ್ನು ಬಳಸಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣಾ ಆಯುಕ್ತ ಸುನಿಲ್​ ಅರೋರಾ, “ಯಾವುದೇ ಕಾರಣಕ್ಕೂ ಮತಪತ್ರಗಳನ್ನು ಬಳಸುವುದಿಲ್ಲ. ಮರಳಿ ಮತಪತ್ರಗಳ ಯುಗಕ್ಕೆ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

“ಮತಯಂತ್ರ ಬಳಕೆಗೆ ಸಂಬಂಧಿಸಿದಂತೆ ಮತದಾರರು, ಪಕ್ಷಗಳ ಯಾವುದೇ ಟೀಕೆಳಿಗೆ, ಪ್ರತಿಕ್ರಿಯೆಗಳಿಗೆ ನಾವು ಮುಕ್ತರಾಗಿದ್ದೇವೆ. ಆದರೆ ಮತಪತ್ರಗಳಿಗೆ ಮರಳುವ ಯಾವುದೇ ಒತ್ತಾಯಕ್ಕೂ ನಾವು ಮಣಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ತ್ರಿವಿಕ್ರಮ ಮೆರೆಯುತ್ತಿದ್ದಂತೆ ಅದರ ಬೆನ್ನಿಗೇ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುತ್ತಿದ್ದಂತೆಯೇ ಮತಯಂತ್ರಗಳ ದುರುಪಯೋಗದ ದೂರು ಕೇಲಿ ಬಂದುನಾವಣಾ ಆಯೋಗಕ್ಕೆ ಒತ್ತಾಯಿಸುತ್ತಿದ್ದವು.

‘Not going back to ballot papers’, says CEC Sunil Arora

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ