ಶ್ರೀಗಳು ಶಿವೈಕ್ಯರಾದ ವಿಷಯ ತಿಳಿದು ಬಾವುಕರಾದ ಮಠದ ಮಕ್ಕಳು

ಬೆಂಗಳೂರು, ಜ.22- ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನಲೆಯಲ್ಲಿ ಮಠದ ಮಕ್ಕಳು ಶ್ರೀಗಳು ಇಲ್ಲದ ರಾತ್ರಿಯನ್ನು ಒಬ್ಬರಿಗೊಬ್ಬರು ಸಂತೈಸಿ ಕೊಳ್ಳುತ್ತಿರುವ ದೃಶ್ಯ ಮನ ಕಲುಕುವಂತೆ ಇತ್ತು.

ಶ್ರೀಗಳು ಶಿವೈಕ್ಯರಾದ ವಿಚಾರ ತಿಳಿದು ಮಕ್ಕಳು ಭಾವುಕರಾಗಿದ್ದರು.ಸಿದ್ದಗಂಗಾ ಮಠದಲ್ಲೇ ಮಕ್ಕಳು ರಾತ್ರಿಯನ್ನು ಕಳೆದಿದ್ದಾರೆ.ಅಲ್ಲದೇ ಮಠದಲ್ಲೇ ಸಾವಿರಾರು ಭಕ್ತರು ಮಲಗಿದ್ದರು.ಬೇರೆ ಬೇರೆ ಜಿಲ್ಲೆಗಳಿಂದ ಶ್ರೀಗಳ ದರ್ಶನಕ್ಕೆ ಬಂದ ಭಕ್ತರು ಹೊಸ ಮಠದಆವರಣ ಸೇರಿದಂತೆ ಹಲವೆಡೆ ಮಲಗಿದ್ದರು.

ಮಠದ ಆವರಣದಲ್ಲಿದೇವರಕೊನೆಯದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ.ಹೀಗಾಗಿ ಕಳೆದ ರಾತ್ರಿಯಿಡೀ ಶ್ರೀಗಳ ದರ್ಶನಕ್ಕಾಗಿ ಮಠದತ್ತ ಲಕ್ಷಾಂತರ ಜನರದಂಡೇ ಹರಿದು ಬಂದಿತ್ತು.ರಾತ್ರಿಯಿಡೀ ದೇವರದರ್ಶನ ಪಡೆದು ಭಕ್ತರು ಪುನೀತರಾದರು. ಇನ್ನು, ನಡೆದಾಡುವ ದೇವರ ಕಾಣಲು ಭಕ್ತಗಣ ಈಗಲೂ ಮಠದತ್ತ ಧಾವಿಸುತ್ತಿದ್ದು ಶ್ರೀಗಳ ಮೇಲೆ ಅವರಿಟ್ಟಿರುವ ಅದಮ್ಯ ಪ್ರೀತಿ, ಭಕ್ತಿಯನ್ನ ಎತ್ತಿ ತೋರಿಸುತ್ತಿದೆ.ಇನ್ನು, ಕ್ಯಾತ್ಸಂದ್ರ ರೈಲ್ವೆ ಗೇಟ್ ಬಳಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಹಾಸ್ಟೆಲ್ ಆವರಣದೊಳಗೆ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ.ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಶ್ರೀಗಳು ಮಠದ ಆವರಣದಲ್ಲಿ ಯಾವುದೇ ಪ್ರಾಣಿ ಕಂಡರೂ ಆಹಾರ ನೀಡುತ್ತಿದ್ದರು. ಇಂದು ವಿದ್ಯಾರ್ಥಿಗಳ ಪ್ರಾರ್ಥನೆಯ ಸಮಯದಲ್ಲಿ ಶಾಲಾ ಅವರಣದಲ್ಲಿ ನಾಯಿಯೊಂದು ಮಲಗಿದ್ದ ದೃಶ್ಯ ಕಂಡು ಬಂತು.

ಪ್ರತಿದಿನ ಬೆಳಗ್ಗೆ ಶಿವಕುಮಾರ ಸ್ವಾಮಿಜಿಗಳೇ ಮಕ್ಕಳಿಗೆ ಪ್ರಾರ್ಥನೆ ಹೇಳಿಕೊಡುತ್ತಿದ್ದರು.ಆದರೆ ಈಗ ಅವರ ಅಗಲಿಕೆಯಿಂದಾಗಿ ಮಕ್ಕಳು ಗೋಸಲ ಸಿದ್ದೇಶ್ವರ ವೇದಿಕೆ ಮುಂದೆ ಪ್ರಾರ್ಥನೆ ಮಾಡುತ್ತಿದ್ದಾರೆ.ಶಾಲಾ ಮಕ್ಕಳು ಶ್ರೀಗಳನ್ನು ನೆನೆದು ಬೆಳಗಿನ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೋಮವಾರ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವಿಷಯ ತಿಳಿದು ಮಠದ ಮಕ್ಕಳು ಬಿಕ್ಕಳಿಸಿ ಸುಡುಬಿಸಿಲಿನಲ್ಲಿಯೇ ನಿಂತು ಅಳುತ್ತಿದ್ದರು.

ಶ್ರೀಗಳು ಶಿವೈಕ್ಯದಲ್ಲೂ ಮಾನವೀಯತೆ ಮೆರೆದಿದ್ದಾರೆ.ತಾವು ಶಿವೈಕ್ಯರಾದರೆ ಮಕ್ಕಳು ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಬಳಿಕವಷ್ಟೇ ಘೋಷಣೆ ಮಾಡಬೇಕು.ಯಾಕಂದ್ರೆ ಅವರು ಹಸಿವಿನಿಂದ ಇರುವುದುತಮಗೆ ಇಷ್ಟವಿಲ್ಲ ಎಂದು ಮಠದ ಸಿಬ್ಬಂದಿ ಬಳಿ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು.

ಹಾಗಾಗಿ ಸೋಮವಾರ ಶ್ರೀಗಳು ಬೆಳಗ್ಗೆ 11.44ಕ್ಕೆ ಶಿವೈಕ್ಯರಾದರೂ ಮಠದ ಸಿಬ್ಬಂದಿ, ಮಕ್ಕಳು ಊಟ ಮಾಡಿದ ಮೇಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅಂದರೆ ಸುಮಾರು ಮಧ್ಯಾಹ್ನ 1.56ಕ್ಕೆ ವೈದ್ಯರು ಶ್ರೀಗಳು ಸಾವಿನ ವಿಚಾರವನ್ನು ಘೋಷಣೆ ಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ