ತುಮಕೂರು, ಜ.21-ಸಿದ್ದಗಂಗಾ ಶ್ರೀಗಳ ಸೇವೆ ನಮ್ಮ ಸಮಾಜಕ್ಕೆ ಎಂದಿಗೂ ಆದರ್ಶವಾಗಿದೆ. 112ನೇ ವರ್ಷಕ್ಕೆಕಾಲಿಡುವ ಸಂದರ್ಭದಲ್ಲಿಅವರು ಲಿಂಗೈಕ್ಯರಾಗಿರುವುದು ಅತೀವ ದುಃಖ ತಂದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನುಡಿದರು.
ಸಿದ್ದಗಂಗಾ ಕ್ಷೇತ್ರವನ್ನುಅಕ್ಷರ, ಅನ್ನ, ಜ್ಞಾನದಾಸೋಹದ ಪುಣ್ಯಕ್ಷೇತ್ರವನ್ನಾಗಿಸಿದ ಮಹಾನ್ ಸಂತರು ಡಾ.ಶ್ರೀ ಶಿವಕುಮಾರ ಸ್ವಾಮೀಗಳು ಎಂದು ತಿಳಿಸಿದರು.