ಇಂದು ಬೆಳಗ್ಗೆ ಇಹ ಲೋಕ ತ್ಯಜಿಸಿದ ಶ್ರೀ ಶಿವಕುಮಾರ ಸ್ವಾಮಿಗಳು

ತುಮಕೂರು,ಜ.21-ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿರುವ ಕೋಟ್ಯಂತರ ಭಕ್ತರನ್ನು ಶ್ರೀಗಳು ಅಗಲಿದ್ದಾರೆ. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಹಳೆಯ ಮಠದಲ್ಲಿಚಿಕಿತ್ಸೆ ನೀಡುತ್ತಿದ್ದರೂ ಫಲಕಾರಿಯಾಗದೆ ಇಂದು ಬೆಳಗ್ಗೆ 11.44 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಮಠದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ನಾಳೆ ಸಂಜೆ 4.30 ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ.ಶ್ರೀಗಳ ನಿಧನದಗೌರವಾರ್ಥಇಂದು ಮತ್ತು ನಾಳೆ ಸಂಸ್ಥೆಯಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತುಮಕೂರು ಶ್ರೀ ಮಠದ ಆವರಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಾಡಿನ ಜನತೆಯ ಪಾಲಿಗೆ ನಡೆದಾಡುವ ದೇವರಾದ ಸಿದ್ದಗಂಗಾಶ್ರೀಗಳಿಗೆ ಉತ್ತಮ ಗೌರವಕೊಡಬೇಕಾಗಿದೆ. ಹಲವಾರು ಮಠಾಧೀಶರು, ಕಿರಿಯ ಸ್ವಾಮೀಜಿಗಳು, ರಾಜ್ಯ, ದೇಶದೆಲ್ಲೆಡೆಯಿಂದ ಹಲವಾರು ಗಣ್ಯರು ಅಂತಿಮ ದರ್ಶನಕ್ಕೆಆಗಮಿಸಲಿದ್ದಾರೆ. ನಾಳೆ ಮಧ್ಯಾಹ್ನ ಮೂರು ಗಂಟೆಯವರೆಗೆ ಅಂತಿಮದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಶಾಂತ ರೀತಿಯಾಗಿ ಅಂತಿಮ ದರ್ಶನ ಪಡೆಯಬೇಕೆಂದು ಮನವಿ ಮಾಡಿದರು.

ಶ್ರೀಗಳ ಗೌರವಾರ್ಥ ನಾಳೆ ಸರ್ಕಾರಿರಜೆ ಘೋಷಿಸಲಾಗಿದೆ.ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದುಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಿದ್ದಗಂಗಾ ಶ್ರೀಗಳು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರು ಪವಾಡ ಪುರುಷರು.ನಾಡಿನ, ದೇಶದಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.ಅವರ ಅಗಲಿಕೆಯ ವಿಷಯವನ್ನು ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ ಎಂದರು.

ನಿನ್ನೆ ಸಂಜೆಯಿಂದಲೇ ಶ್ರೀಗಳ ಆರೋಗ್ಯ ಹದಗೆಟ್ಟಿತ್ತು.ಇಂದು ಬೆಳಗ್ಗೆ ಮಠದ ಆಪ್ತ ವೈದ್ಯಡಾ.ಪರಮೇಶ್‍ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳ ಪ್ರೋಟಿನ್ ಅಂಶ ಕಡಿಮೆಯಾಗಿ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು. ಅದರ ಬೆನ್ನಲ್ಲೆ ಶ್ರೀಗಳು ಇನ್ನು ನೂರು ಕಾಲ ಬಾಳಲಿ ಎಂದು ನಾಡಿನಾದ್ಯಂತ ಭಕ್ತರು ಪ್ರಾರ್ಥನೆ, ಪೂಜೆ, ಹೋಮ, ಹವನದಲ್ಲಿತೊಡಗಿದರು. ಮೂಲಗಳ ಪ್ರಕಾರ ಶ್ರೀಗಳ ಆಪ್ತ ವೈದ್ಯಡಾ.ಪರಮೇಶ್ ನೇತೃತ್ವದತಂಡ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಿತ್ತು. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರುಕಂಡು ಬಂದಿತ್ತು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ಮತ್ತೆ ಅವರ ಆರೋಗ್ಯದಲ್ಲಿಏರುಪೇರು ಕಂಡು ಬಂದಿತ್ತು.ಶ್ರೀಗಳಿಗಳಿಗೆ ನಿಶ್ಯಕ್ತಿ ಹೆಚ್ಚಾಗಿದ್ದು, ನಿನ್ನೆ ಆರ್ಯುವೇದಿಕ್‍ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಶ್ರೀಗಳು ಬಳಲುತ್ತಿದ್ದರು.

ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿಚೇತರಿಕೆ ಕಂಡು ಬಂದಿತ್ತು. ತಮ್ಮನ್ನು ನೋಡಲು ಬಂದ ಭಕ್ತರನ್ನುಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣುತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ಶಿವಕುಮಾರ ಸ್ವಾಮೀಜಿಗಳು ಭಾಗಿಯಾಗಿದ್ದರು.

ಗಣ್ಯರದಂಡು:
ಇನ್ನು ಶ್ರೀಗಳ ಆರೋಗ್ಯ ಸ್ಥಿತಿ ಏರುಪೇರಾದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮೇಲ್ಲಾ ಅಧಿಕೃತ ಕಾರ್ಯಕ್ರಮರದ್ದು ಪಡಿಸಿ ಸಿದ್ದಗಂಗಾ ಮಠಕ್ಕೆ ದೌಡಾಯಿಸಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಎಂ.ಬಿ.ಪಾಟೀಲ್, ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಮಠಕ್ಕೆ ಆಗಮಿಸಿದ್ದಾರೆ.

ಐಜಿಪಿ ದಯಾನಂದ್ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಮಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ, ಹಾಸನ ಸೇರಿದಂತೆಒಟ್ಟು 10 ಜಿಲ್ಲೆಗಳ ಪೊಲೀಸ್‍ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ, ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್ ಸೇರಿದಂತೆ ವಿವಿಧ ಶ್ರೇಣಿಯ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ