ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಯವರ ಬದುಕೇ ಜೀವನಾದರ್ಶ

ತುಮಕೂರು, ಜ.21-ವಿಶ್ವರತ್ನ, ರಾಷ್ಟ್ರಕಂಡ ಮಹಾತಪಸ್ವಿ, ಭಕ್ತಿಯ ದಾಸೋಹದಿಂದ ಲಕ್ಷಾಂತರ ಮನೆಗಳಲ್ಲಿ ಜ್ಯೋತಿ ಬೆಳಗಿಸಿದ ತ್ರಿವಿಧ ದಾಸೋಹಿ,, ಸ್ವಾತಂತ್ರ್ಯ ಪೂರ್ವದಲ್ಲಿಕರುನಾಡ ತಾಯಿ ಹೆತ್ತ ಶತಮಾನದ ಮಹಾನ್ ಸಂತ. ಸಿದ್ದಗಂಗೆಯ ಸಿದ್ಧಿ ಪುರುಷರಾದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಯವರ ಬದುಕೇ ಜೀವನಾದರ್ಶ.

ನಡೆದಾಡುವ ದೇವರು ನೆಲೆಸಿದ ಪುಣ್ಯ ಭೂಮಿಯೆಂದೇ ತುಮಕೂರು ಇದೀಗ ಹೆಸರುವಾಸಿ. ಈ ಕ್ಷೇತ್ರದ ಕೀರ್ತಿಯನ್ನ ವಿಶ್ವಮಟ್ಟಕ್ಕೆ ಕೊಂಡೊಯ್ದ ಹಿರಿಮೆ ನಡೆದಾಡುವ ದೇವರು ಶ್ರೀ ಶಿವಕುಮಾರಸ್ವಾಮೀಜಿಗಳದ್ದು. ಸಿದ್ದಗಂಗಾ ಕ್ಷೇತ್ರಕ್ಕೆ 900 ವರ್ಷಗಳ ಸುದೀರ್ಘಇತಿಹಾಸ, ಭವ್ಯ ಪರಂಪರೆ ಇದೆ. ಗೋಸಲ ಸಿದ್ದೇಶ್ವರರಿಂದ ಸಿದ್ದಗಂಗಾ ಕ್ಷೇತ್ರ ಬೆಳಕಿಗೆ ಬಂತು. ಕಲ್ಯಾಣದ ಕ್ರಾಂತಿಯ ನಂತರ ನಾನಾ ಕಡೆಗೆ ಚೆದುರಿದ ಶರಣರ ಒಂದು ಗುಂಪು ಶಿವಗಂಗೆ, ಸಿದ್ದಗಂಗೆ, ಗೂಳೂರು, ಗುಬ್ಬಿ ಬೇರೆ ಬೇರೆಕಡೆ ಸಂಚರಿಸಿ ತಮ್ಮ ಶರಣಧರ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದವು. ಇದರಲ್ಲಿ ಸಿದ್ದಗಂಗಾ ಕ್ಷೇತ್ರಕ್ಕೆ ಆಗಮಿಸಿದವರೇ ಗೋಸಲ ಸಿದ್ದೇಶ್ವರರು. ಚಾಮರಾಜನಗರ ಜಿಲ್ಲೆ ಹರದನಹಳ್ಳಿಯ ಶೂನ್ಯ ಪೀಠ ಪರಂಪರೆಯ ಗೋಸಲ ಸಿದ್ದೇಶ್ವರರು ಧರ್ಮ ಪ್ರಚಾರಾರ್ಥ ವಿರಕ್ತಗಣಗಳೊಡನೆ ದೇಶಾಟನೆ ಹೊರಟು ಸಿದ್ದಗಂಗೆ ಬೆಟ್ಟದ ತಪ್ಪಲಿಗೆ ಬಂದು ತಪೋನುಷ್ಠಾನ ಮಾಡಿದರು.

ಒಮ್ಮೆ ಒಬ್ಬ ವಿರಕ್ತರಿಗೆ ಬಾಯಾರಿಕೆಯಾಗಿ ಕತ್ತಲಲ್ಲಿ ನೀರಿಗಾಗಿ ಪರದಾಡಿದರು. ವೃದ್ಧ ಯೋಗಿಗಳು ಶಕ್ತಿ ಹೀನರಾಗಿ ಗೋಸಲ ಸಿದ್ದೇಶ್ವರರನ್ನು ಪ್ರಾರ್ಥಿಸಿದರು. ಆಗ ಸಿದ್ದೇಶ್ವರರು ಪ್ರತ್ಯಕ್ಷರಾಗಿ ತಮ್ಮ ಮೊಣಕಾಲಿನಿಂದ ಬಂಡೆಗೆ ಗುದ್ದಿದ್ದಾಗ ಬಂಡೆ ಸೀಳಿಕೊಂಡು ಜಲ ಒಸರಿಸಿತು. ಈ ಸಿದ್ದರ ಪಾದ ಸ್ಪರ್ಶದಿಂದ ಉದ್ಭವವಾದ ಗಂಗೆಯೇ ಸಿದ್ದಗಂಗೆ. ಅಂದಿನಿಂದ ಈ ಕ್ಷೇತ್ರಕ್ಕೆ ಸಿದ್ದಗಂಗೆ ಎಂಬ ಹೆಸರು ಬಂತು.ಇಂದಿಗೂ ಭಕ್ತರುತಮ್ಮ ಸಂತಾನ ಪ್ರಾಪ್ತಿ, ಇಷ್ಟ ಸಿದ್ದಿಗೆ, ಗಂಗಾ ಪೂಜೆ ಮಾಡಿತಮ್ಮ ಮನದ ಮಲಿನತೆಯನ್ನು ಕಳೆದುಕೊಳ್ಳುತ್ತಾರೆ.

ಗೋಸಲ ಸಿದ್ದೇಶ್ವರರಿಂದ ಬೆಳಕಿಗೆ ಬಂದ ಸಿದ್ದಗಂಗೆ ನಂತರ ಮಠವಾಗಿ ಪರಿವರ್ತನೆಯಾಯಿತು. ಗೋಸಲ ಸಿದ್ದೇಶ್ವರರು ಅಲ್ಲಿನ ಭಕ್ತರ ಸಹಾಯದಿಂದ ಬೆಟ್ಟದತಪ್ಪಲಿನಲ್ಲಿಒಂದು ಮಠ ಕಟ್ಟಿದರು. ಅದೇ ಈಗ ಪ್ರಸ್ತುತ ಇರುವ ಸಿದ್ದಗಂಗಾ ಮಠದಚರಿತ್ರೆ ಗಮನಿಸಿದಾಗ 1350ರಲ್ಲಿ ನಿರ್ಮಾಣವಾಗಿರಬಹುದು ಎನ್ನಲಾಗುತ್ತದೆ. ನಂತರ ಸಿದ್ದೇಶ್ವರರು ಬಹುಕಾಲ ಇದೇ ಮಠದಲ್ಲಿ ಅನುಷ್ಠಾನಗೊಂಡಿದ್ದರು.

ನಂತರ ಗುಬ್ಬಿಯ ಗೋಸಲ ಚೆನ್ನ ಬಸವ ರಾಜೇಂದ್ರರಿಗೆ ಅನುಗ್ರಹ ಮಾಡಿದರು. ಗೋಸಲ ಚೆನ್ನ ಬಸವೇಶ್ವರರಿಂದ ಶ್ರೀ ಸಿದ್ದಲಿಂಗೇಶ್ವರರು ಷಟ್ಸ್ಥಲ ಜ್ಞಾನೋಪದೇಶ ಪಡೆದು ವಚನ ಸಾಹಿತ್ಯ ಪುನರುಜ್ಜೀವನ ಗೊಳಿಸಿದ ಮಹಾ ಯೋಗಿಗಳಾದರು.ಇವರು ಬೋಳ ಬಸವೇಶ್ವರರಿಗೆ ಅಧಿಕಾರ ವಹಿಸಿಕೊಟ್ಟು 700 ವಿರಕ್ತರು, 3000 ಚರಮೂರ್ತಿಗಳೊಡನೆ ಸಮಸ್ತ ಭಾರತವನ್ನು ಸುತ್ತಿ ಮಠಗಳನ್ನು ಸ್ಥಾಪಿಸಿ ಸಮರ್ಥ ಶಿಷ್ಯರನ್ನು ಅಲ್ಲಿಯೆ ನೆಲೆಗೊಳಿಸಿದ್ದರು. 1470 ರಲ್ಲಿ ಮತ್ತೆ ಸಿದ್ದಗಂಗೆಗೆ ಬಂದು ಅನೇಕ ಪವಾಡಗಳನ್ನು ಮಾಡತೊಡಗಿದರು. ನಂತರ ಕುಣಿಗಲ್ ನ ಕಗ್ಗೆರೆಯಲ್ಲಿತಪೋನಿಷ್ಠೆ ಕೈಗೊಂಡರು. ನಂತರ ಎಡೆಯೂರಿನಲ್ಲಿ ಶಿವಯೋಗ ಸಮಾಧಿ ಹೊಂದಿದರು.

1470ರ ನಂತರ ಕೆಲವಾರು ವರ್ಷಗಳು ಸಿದ್ದಗಂಗೆಯ ಇತಿಹಾಸದ ದಾಖಲೆಗಳು ಲಭ್ಯವಾಗಿಲ್ಲ. 1850 ರಿಂದ ಮತ್ತೆ ಸಿದ್ದಗಂಗಾ ಮಠದಚರಿತ್ರೆ ಶುರುವಾಗುತ್ತದೆ. ಉತ್ತರ ಕರ್ನಾಟಕದಿಂದ ಗುಬ್ಬಿಗೆ ಬಂದ ಅಟವಿಸ್ವಾಮಿಗಳು ಗೋಸಲ ಚನ್ನಬಸವೇಶ್ವರ ಸಮಾಧಿಯ ಸೇವೆ ಮಾಡಿದರು.

ಅಲ್ಲಿಯೇ ಒಂದು ತೊರೆಯ ಪಕ್ಕದಲ್ಲಿ ಮಠವನ್ನುಕಟ್ಟಿದ್ದರು. ಅದೇ ಈಗಿನ ತೊರೆ ಮಠ. ಒಮ್ಮೆ ಸಿದ್ದಗಂಗಾ ಕ್ಷೇತ್ರದ ಮಹಿಮೆ ಕೇಳಿ ಅಲ್ಲಿಗೆ ಬಂದು ಗಂಗಾ ಪೂಜೆ ಕೈಗೊಂಡರು. ಸಿದ್ದಲಿಂಗೇಶ್ವರರ ಬಳಿಕ ಅಭಿವೃದ್ದಿಕಾಣದ ಸಿದ್ದಗಂಗಾ ಕ್ಷೇತ್ರ ಮತ್ತೆ ಪಾವನ ವಾಯಿತು. ಅಟವಿಸ್ವಾಮಿಗಳು ಅಲ್ಲಿಗೆ ಬರುವ ಭಕ್ತರಿಗೆ ಅನ್ನ, ವಸತಿ ನೀಡಲು ಅನ್ನಸಂತರ್ಪಣೆಕಾರ್ಯ ಪ್ರಾರಂಭಿಸಿದ್ದರು. ಅಂದು ಅವರ ಅಮೃತ ಹಸ್ತದಿಂದ ಹಚ್ಚಿದ ಅಡುಗೆ ಒಲೆ ಇಂದಿಗೂ ನಂದದೆ ಮಠಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹಸಿವು ನೀಗಿಸುತ್ತಿದೆ. ಇಲ್ಲಿಂದ ಶುರುವಾಯಿತು ಸಿದ್ದಗಂಗೆಯ ದಾಸೋಹ ವೈಭವ. ಅನ್ನದಾಸೋಹದ ಜೊತೆಗೆ ಅಕ್ಷರ ಸೇರಿ ಜ್ಞಾನ ದಾಸೋಹವೂ ಶುರುವಾಯಿತು. ಸಂಸ್ಕøತ ಅಭ್ಯಾಸ ಮತ್ತು ಪ್ರಾಥಮಿಕ ಹಂತದ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿ ನಿಲಯಗಳು ಪ್ರಾರಂಭಿಸಿದರು. ಅಂದು ಪ್ರಾರಂಭಿಸಿದ ಅನ್ನ, ವಿದ್ಯೆ ವಸತಿ, ಭಕ್ತಿಯಜ್ಞಾನ ದಾಸೋಹಗಳು ಇಂದಿಗೂ ಮುಂದುರಿಯುತ್ತಾ ಸಾಗಿದೆ.

ಅಟವಿ ಸ್ವಾಮಿಗಳ ನಂತರ ಉದ್ದಾನ ಶಿವಯೋಗಿಗಳು ಮಠದ ಉತ್ತರಾಧಿಕಾರಿಯಾದರು. ಅಟವಿ ಶ್ರೀಗಳಿಗೆ ಈಗಿನ ಚಿಕ್ಕತೊಟ್ಲುಕರೆ ಮಠದಲ್ಲಿ ಅವರ ಅಪೇಕ್ಷೆಯಂತೆ ಕ್ರಿಯಾ ಸಮಾಧಿಯನ್ನು ಮಾಡಲಾಗಿತ್ತು. ಉದ್ದಾನ ಶಿವಯೋಗಿಗಳ ಮೂಲ ಹೆಸರು ರುದ್ರಪ್ಪಇವರು ಲಕ್ಕೂರು ಗ್ರಾಮದವರು. ಹುಟ್ಟು ಮಹಿಮಾ ಶಾಲಿ, ಯೋಗ ಸಾಧನೆಯಲ್ಲಿ ಮೇರು ವ್ಯಕ್ತಿ, ಕುರಿಕಾಯುವುದು ಅವರ ಕಾಯಕ. ಒಂದೆರಡು ಬಾರಿ ಸಿದ್ದಗಂಗೆ ಬಂದು ಪೂಜೆ ಮಾಡಿಸಿಕೊಂಡು ಹೋಗಿದ್ದರು. ಮನೆಯಲ್ಲಿ ನಡೆದ ಸಣ್ಣಘಟನೆಯಿಂದ ಮನೆ ಬಿಟ್ಟು ಬಂದು ಸಿದ್ದಗಂಗೆಯ ಮಠದ ಸೇವೆಯಲ್ಲಿ ನಿರತರಾದರು.

ಅಟವಿ ಸ್ವಾಮಿಗಳ ಅಗ್ನಿ ಪರೀಕ್ಷೆಯಲ್ಲಿರುದ್ರಪ್ಪಉತ್ತೀರ್ಣರಾದರು. ಅವರ ಲೋಕಜೀವನ, ಮಠಕ್ಕೆ ಹೇಳಿ ಮಾಡಿಸಿದ್ದಂತ ವ್ಯಕ್ತಿಯಾಗಿದ್ದರು. ಅಟವಿಸ್ವಾಮಿಗಳು ಶಿಷ್ಯನ ಹೆಗಲ ಮೇಲೆ ಸಂಪೂರ್ಣಕಾರ್ಯಭಾರ ವಹಿಸಿ ಸಂನ್ಯಾಸ ದೀಕ್ಷೆ ನೀಡಿ ಉದ್ದಾನ ಶಿವಯೋಗಿಗಳೆಂದು ಹೆಸರು ಬದಲಾಯಿಸಿದರು. ಉದ್ದಾನಪ್ಪನವರು ಬಹಳ ಕೋಪಿಷ್ಟರು ಇಟ್ಟರೆ ಶಾಪ ಕೊಟ್ಟರೆ ವರವೆಂಬಂತೆ ಕಾಣುತ್ತಿದ್ದರು. ಇವರಕಾಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತು. ದಾಸೋಹದ ಖರ್ಚು ಹೆಚ್ಚಾಗತೊಡಗಿತು. 1905 ರಲ್ಲಿಜಾತ್ರೆ ದನಗಳ ಪರಿಷೆ ಆರಂಭಿಸಿದರು. ಮಠಕ್ಕೆ ದವಸಧಾನ್ಯ, ತರಕಾರಿ ಊಟದ ಎಲೆ ಪವಾಡ ಸದೃಶ್ಯವಾಗಿ ಹರಿದು ಬರಲು ಪ್ರಾರಂಭಿಸಿತು.ಇಂದಿಗೂ ದಾಸೋಹದ ಖರ್ಚು ವೆಚ್ಚ ಲೆಕ್ಕಹಾಕಿದ್ದಿಲ್ಲ.

ಮರುಳಾರಾಧ್ಯರ ಆತ್ಮೀಯ ಸ್ನೇಹಿತಯೋಗ್ಯದಕ್ಷ, ಪ್ರಾಮಾಣಿಕ ಮಾಗಡಿತಾಲ್ಲೂಕಿನ ವೀರಾಪುರದ ಶಿವಣ್ಣನನ್ನು ಗುರುತಿಸಿ ಮಠದ ಉತ್ತರಾಧಿಕಾರಿಯೆಂದು ಘೋಷಣೆಯಾಯಿತು. ಶಿವಣ್ಣನಿಗೆ ಆ ಕ್ಷಣಕ್ಕೆ ಏನೂ ತೋಚಲಿಲ್ಲ, ಮುಗ್ದ ಮಗುವಿನಂತೆ ಗುರುಗಳಿಗೆ ಒಪ್ಪಿಗೆಯೆಂದು ನಮಸ್ಕರಿಸಿದರು.

ಉದ್ದಾನ ಶಿವಯೋಗಿಗಳು ಶಿವಣ್ಣ ನನ್ನ ಶ್ರೀಮಾನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಶಿವಕುಮಾರಸ್ವಾಮಿಗಳೆಂದು ನಾಮಕರಣ ಮಾಡಿದರು. ಅವರೇ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ವೀರಾಪುರಗ್ರಾಮ ಶ್ರೀಗಳ ಜನ್ಮಸ್ಥಳ.ಇವರ ಮೂಲ ಹೆಸರು ಶಿವಣ್ಣ.ಏಪ್ರಿಲ್ 01-1908 ರಂದು ಹೊನ್ನೆಗೌಡ, ಗಂಗಮ್ಮ ದಂಪತಿಗಳ ಹದಿಮೂರು ಮಕ್ಕಳಲ್ಲಿ ಕಿರಿಯ ಮಗನಾಗಿ ಜನಿಸಿದ ಶಿವಣ್ಣ.

ಸರ್ಕಾರಿ ಪ್ರೈಮರಿ ಶಾಲೆ ಹೊರತು ಪಡಿಸಿದರೆ ಯಾವ ಆಧುನಿಕ ಸೌಲಭ್ಯಗಳು ಇರಲಿಲ್ಲ. ಸಂಪ್ರದಾಯಸ್ಥ ಶರಣರ ಕುಟುಂಬದ ವಾತಾವರಣದಲ್ಲಿ ಬೆಳೆದ ಶಿವಣ್ಣ ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಸರ್ಕಾರಿ ಶಾಲೆ ಹಾಗೂ ಪಾಲನಹಳ್ಳಿ ಕೂಲಿ ಮಠದಲ್ಲಿ ಮುಗಿಸಿದರು. ನಂತರ ಓದಿನಲ್ಲಿ ಹೆಚ್ಚು ಆಸಕ್ತಿವಹಿಸಿದ ಶಿವಣ್ಣ 1919 ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿತೇರ್ಗಡೆಯಾದರು.ನಂತರ ತುಮಕೂರಿಗೆ ಬಂದು ಸರ್ಕಾರಿ ಶಾಲೆ ಸೇರಿಕೊಂಡರು.

1926ರಲ್ಲಿ ಮೆಟ್ರಿಕ್ಯುಲೇಷನ್‍ ತೇರ್ಗಡೆಯಾದರು. ಮಹಾಲಿಂಗಸ್ವಾಮಿಗಳು ಸಿದ್ದಗಂಗೆಯ ಪೂರ್ವ ನಿಯೋಜಿತ ಉತ್ತರಾಧಿಕಾರಿಯಾದ್ದರಿಂದ ಸಿದ್ದಗಂಗೆಯ ಪರಿಚಯವಾಯಿತು. ತುಮಕೂರಿನಲ್ಲಿ ಪ್ಲೇಗ್‍ರೋಗ ಹರಡಿದ್ದರಿಂದ ಸಿದ್ದಗಂಗಾ ಮಠಕ್ಕೆ ವಾಸ್ತವ್ಯ ಬದಲಿಸಲು ನಿರ್ಧರಿಸಿದ್ದರು. ಆದರೆ ಉದ್ಧಾನ ಶಿವಯೋಗಿಗಳು ಇದಕ್ಕೆಅನುಮತಿ ನೀಡಲಿಲ್ಲ. ಇದರಿಂದ ಶೆಟ್ಟಿಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದು ವಿದ್ಯಾಭ್ಯಾಸ ಮುಂದುರೆಸಿದರು. ನಂತರ ಶ್ರೀಮಠದಲ್ಲಿ ಆಶ್ರಯ ಪಡೆದರು. ಸಿದ್ದಗಂಗಾ ಮಠದಲ್ಲಿಎಲ್ಲರ ವಿಸ್ವಾಸ ಗಳಿಸಿ ತುಮಕೂರಿನಲ್ಲಿ ನಡೆದ ಎಂಟ್ರೆನ್ಸ್ ಪರೀಕ್ಷೆಯಲ್ಲಿತೇರ್ಗಡೆಯಾಗಿ ಬೆಂಗಳೂರಿನ ತೋಟದಪ್ಪನವರ ವಿದ್ಯಾರ್ಥಿ ನಿಲಯದಲ್ಲಿಆಶ್ರಯ ಪಡೆದು 1927 ರಲ್ಲಿ ಸೆಂಟ್ರಲ್‍ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುರೆಸಿದರು.

ಉದ್ದಾನ ಶಿವಯೋಗಿಗಳ ಆಧ್ಯಾತ್ಮ ವಿಚಾರಗಳಿಂದ ಪ್ರಭಾವಿತರಾದ ಶಿವಣ್ಣ ಸೆಂಟ್ರಲ್‍ಕಾಲೇಜಿನಲ್ಲಿಓದಿದ್ದು ವಿಜ್ಞಾನ ವಿಷಯವಾದರೆ, ಜೀವನದಲ್ಲಿ ಅಳವಡಿಸಿಕೊಂಡಿದ್ದು ಆಧ್ಯಾತ್ಮ ವಾಗಿತ್ತು.

ಉದ್ದಾನ ಶಿವಯೋಗಿಗಳ ಆಜ್ಞೆಯಂತೆ ಶಿವಣ್ಣ ಉತ್ತರಾಧಿಕಾರಿಯಾಗಿ ನೇಮಕವಾದರು. 03-03-1930 ರಂದು ಶ್ರೀಉದ್ದಾನ ಶಿವಯೋಗಿಗಳು ಮಠದ ನಿರಂಜನ ಜಂಗಮಾಧಿಕಾರವನ್ನ ಶ್ರೀಶಿವಕುಮಾರ ಸ್ವಾಮಿಗಳಿಗೆ ಒಪ್ಪಿಸಿ ಆಶೀರ್ವದಿಸಿದರು.

ಅಂದಿನಿಂದ ಇಂದಿನವರೆಗೂ ಶ್ರೀ ಕ್ಷೇತ್ರದ ಮತ್ತು ಸಮಾಜದ ಹಿತಕ್ಕಾಗಿ ಅವಿಶ್ರಾಂತವಾಗಿ ಸದ್ಬೆಳಕು ಕರುಣಿಸುತ್ತಾ,ಸಹಸ್ರಾರು ಮಕ್ಕಳ ಭವಿಷ್ಯವನ್ನು ಬೆಳಗುತ್ತಾ ಮುನ್ನಡೆಸಿದರು.

ಶಿವಕುಮಾರ ಮಹಾಸ್ವಾಮಿಗಳು ಮಠದ ಉತ್ತರಾಧಿಕಾರವನ್ನು ವಹಿಸಿಕೊಂಡ ಮೇಲೆ ಭೀಕರ ಬರಗಾಲದಂತಹ ಹಲವಾರು ಕಷ್ಟಗಳು ಎದುರಾದವು. ಈ ವೇಳೆ ಶ್ರೀಗಳು ಕುದುರೆಯೇರಿ ಹಳ್ಳಿ, ಹಳ್ಳಿಗಳಿಗೆ ತೆರಳಿ ಭಿಕ್ಷಾಟನೆ ಮಾಡಿ ಮಕ್ಕಳು ಹಾಗೂ ಬಂದ ಭಕ್ತಾದಿಗಳಿಗೆ ಅನ್ನ ಹಾಕಿ ಸಾಕಿದರು.

ಆರದದಾಸೋಹದ ಒಲೆ:
ಆಮೇಲೆ ನಡೆದದೆಲ್ಲವೂ ಪವಾಡ ಶ್ರೀ ಮಠದಲ್ಲಿ ನಿತ್ಯ ಸಾವಿರಾರುಟನ್‍ ದವಸ ಧಾನ್ಯ ಹರಿದು ಬರುತ್ತಿದೆ.ಎಷ್ಟು ಬರುತ್ತಿದೆ, ಎಷ್ಟು ಖರ್ಚಾಗಿದೆ ಎಂಬ ಲೆಕ್ಕ ಇಟ್ಟವರಿಲ್ಲ. ದಿನಕ್ಕೆ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಜನರು ಊಟ ಸೇವಿಸುತ್ತಾರೆ.

ಒಂದು ದಿನಕ್ಕೆ ಬೇಕಾಗುವ ಅಂದಾಜು ಲೆಕ್ಕ: ಅಕ್ಕಿ 3500 ಕೆಜಿ, ರಾಗಿ ಹಿಟ್ಟು 1500 ಕೆಜಿ, ರವೆ ಉಪ್ಪಿಟ್ಟು 500 ಕೆಜಿ, ಈರುಳ್ಳಿ 300 ಕೆಜಿ, ಖಾರಪುಡಿ ಸಾಂಬಾರ್ ಪುಡಿ 100 ಕೆ ಜಿ, ಕಡಲೆ ಕಾಯಿ ಎಣ್ಣೆ 150 ಲೀಟರ್, ತರಕಾರಿ 400 ಕೆಜಿ ಬೇಕಾಗುತ್ತದೆ. ಇದರ ಜೊತೆಇನ್ನು ಕೆಲ ದಿನಸಿ ಸಾಮಾನುಗಳು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತದೆ.

ಶಿಷ್ಯ ವೃಂದದೊಂದಿಗೆ ಶ್ರೀಗಳು ಇಷ್ಟ ಲಿಂಗವಿಡಿದು ದೀಪದ ಬೆಳಕಿನಲ್ಲಿ ಶಿವಪೂಜೆ ನೆರವೇರಿಸುತ್ತಿದ್ದರು. ನಂತರ ನೈವೇದ್ಯ ಮಾಡಿ, ಧ್ಯಾನ ಮಾಡಿ, ಬೇವಿನ ಕಷಾಯ ಸೇವನೆ ಮಾಡುತ್ತಿದ್ದರು. ನಂತರ ಮಠದಲ್ಲೆ ವಿಶೇಷ ಕೊಠಡಿಯಲ್ಲಿ ತಯಾರಿಸಿದ ಇಡ್ಲಿ, ಬೇಳೆ ತೊವ್ವೆ ಸೇವಿಸುತ್ತಿದ್ದರು. ಶ್ರೀಗಳ ಜಪತಪ ಮಿತ ಆಹಾರ ಯೋಗ ಧ್ಯಾನಗಳ ಫಲವೇ ಅವರ 111 ವರ್ಷದ ಆರೋಗ್ಯದ ರಹಸ್ಯವಾಗಿತ್ತು.

ಶ್ರೀಗಳು ಸ್ವತಃ ತಾವೇ ಯಂತ್ರಗಳನ್ನ ಬರೆದು ಬಂದ ಭಕ್ತಾದಿಗಳಿಗೆ ಧರಿಸುತ್ತಿದ್ದರು.ಸಿದ್ದಗಂಗಾ ಶ್ರೀಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ದಶಕಗಳ ಕಾಲ ಬೆಳಗಿನ ಸಮಯದಲ್ಲಿತಾವೇ ಶಿಕ್ಷಕರಾಗಿ ಮಕ್ಕಳಿಗೆ ಸಂಸ್ಕøತ, ಇಂಗ್ಲೀಷ್ ಪಾಠಗಳನ್ನ ಮಾಡುತ್ತಿದ್ದರು.

ಮಠದಲ್ಲಿಓದಿದ ವಿದ್ಯಾರ್ಥಿಗಳಲ್ಲಿ ಕವಿ ಜಿ.ಎಸ್.ಶಿವರುದ್ರಪ್ಪನವರೂ ಕೂಡಒಬ್ಬರು.ಇದೇ ರೀತಿ ಅದೆಷ್ಟೋ ಜನ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಗಳನ್ನು ಪಡೆದಿದ್ದಾರೆ. ಕೆಲವರು ವಿದೇಶಗಳಿಗೆ ಹೋಗಿ ಶಿಕ್ಷಣ ನೌಕರಿ ಮಾಡುತ್ತಿದ್ದಾರೆ. ಅವರೆಲ್ಲರೂ ಸೇರಿ ಹಳೆ ವಿದ್ಯಾರ್ಥಿಗಳ ಸಂಘವನ್ನೇ ಮಠದಲ್ಲಿ ಸ್ಥಾಪನೆ ಮಾಡಿದ್ದಾರೆ. ಪ್ರತಿ ವರ್ಷ ತಮ್ಮ ನೆಚ್ಚಿನ ಶ್ರೀಗಳಿಗೆ ಗುರುವಂದನೆ ಸಲ್ಲಿಸುತ್ತಾರೆ.

ಸಿದ್ದಗಂಗಾ ಶ್ರೀಗಳ ಸಲ್ಲಿಸುತ್ತಿರುವ ಅನನ್ಯ ಹಾಗೂ ಅನುಪಮ ಸೇವೆಯನ್ನು  ರಾಷ್ಟದ ನಾಡಿನ ಗಣ್ಯರು, ಮಠಾಧಿಪತಿಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಪ್ರಧಾನಿ ನರೇದ್ರ ಮೋದಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರತಿಭಾ ಪಾಟೀಲ್ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಗಣ್ಯರು ಮಠಕ್ಕೆ ಭೇಟಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಶ್ರೀಗಳ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾನಿಲಯ 1965 ರಲ್ಲಿ ಬೆಂಗಳೂರು ವಿವಿ 2013ರಲ್ಲಿ ಗೌರವ ಡಿ ಲೀಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಅತ್ಯುನ್ನತ ಪ್ರಶಸ್ತಿ ಕರ್ನಾಟಕರತ್ನ ನೀಡಿದ್ದು, ಏಪ್ರಿಲ್ 01, 2010 ರಂದು 2007ರ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

13-05-2015 ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 2017 ನೇ ಸಾಲಿನ ಶ್ರೀ ಭಗವಾನ್ ಮಹಾವೀರ್ ಪ್ರಶಸ್ತಿ ಸೇರಿದಂತೆ ಇನ್ನೂ ಹತ್ತು ಹಲವು ಪ್ರಶಸ್ತಿಗಳಿಗೆ ನೀಡಿ ತಮ್ಮ ಮೌಲ್ಯ ಹೆಚ್ಚಿಸಿಕೊಂಡಿವೆ.

ಶ್ರೀಗಳಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ನೀಡುವಂತೆ ಭಕ್ತರು ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಆದರೆ ಇಡೀ ವಿಶ್ವಕ್ಕೆ ರತ್ನವಾಗಿರುವ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡುವುದರಿಂದ ಭಾರತ ದೇಶಕ್ಕೆಒಂದು ಮೆರುಗು ಬಂದಂತಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯ.

ಸಿದ್ದಗಂಗಾ ಮಠದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಸಿದ್ದಗಂಗಾ ಶ್ರೀಗಳದ್ದು. 89 ವರ್ಷಗಳ ಸುದೀರ್ಘ ಕಾಲ ಕುಳಿತು ಲೋಕ ಕಲ್ಯಾಣಕ್ಕಾಗಿ ತಮ್ಮನ್ನುಅರ್ಪಣ ಭಾವದಿಂದ ಸಮರ್ಪಿಸಿಕೊಂಡಿದ್ದ ಪರಮಪೂಜ್ಯರು. ಕತೃತ್ವ ಶಕ್ತಿ,ದೂರದೃಷ್ಟಿ, ಕ್ರಿಯಾಶೀಲತೆ, ದೀನ ದಲಿತರ ಮೇಲಿನ ಕಾಳಜಿ ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಅಕ್ಷರಾಭ್ಯಾಸದ ಜೊತೆಗೆ ನೈತಿಕ ಶಿಕ್ಷಣ ನೀಡಿ ವಿಶ್ವದಾದ್ಯಂತ ನಮ್ಮ ಸಂಸ್ಕøತಿಯ ಜ್ಯೋತಿಗಳಾಗಿ ಬೆಳಗುವಂತೆ ಮಾಡಿದ್ದಾರೆ.

ಶ್ರೀಗಳು ಯಾವತ್ತೂ ಕಣ್ಣಮುಂದೆ ಕಂಡದ್ದನ್ನ ಹಠಾತ್ತನೆ ನಂಬಿದವರಲ್ಲ.. ಕೇಳಿಸಿಕೊಂಡೂ ನಂಬಿದವರಲ್ಲ ಸತ್ಯಕ್ಕೆ ಅದರದ್ದೇ ಆದ ಶಕ್ತಿ ಇರುತ್ತೆ, ರೂಪ ಇರುತ್ತೆ, ಮಹತ್ವ ಇರುತ್ತೆ. ಅದು ಯಾರದ್ದೋ ಬಲವಂತಕ್ಕೆ ನಂಬುವಂಥಾದ್ದು ಅಲ್ಲಒಬ್ಬ ವ್ಯಕ್ತಿಗೆ ಹೃದಯಾಂತರಾಳದಿಂದ ಬಂದ ವಿಚಾರಗಳು ಮಾತ್ರ ಸತ್ಯ ಎಂದು ನಂಬಿದವರು.

ತುಮಕೂರು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಜಾತಿಯ ಚೌಕಟ್ಟನ್ನು ಮೀರಿ ಬದುಕು ನಡೆಸಿದ ಶ್ರೀಗಳ ಬದುಕೇ ದಾರಿ ದೀಪವಾಗಿತ್ತು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಶ್ರೀಗಳು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳನ್ನು ತೆರೆದರು. ನಾಗರಿಕ ಸವಲತ್ತುಗಳಿಲ್ಲದ ಹಳ್ಳಿಗಳಲ್ಲಿ ಶಾಲೆಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಒಬ್ಬ ವ್ಯಕ್ತಿ ಶಿಕ್ಷಣ ಪಡೆದರೆ ಅದರಿಂದ ಉದ್ಯೋಗ, ಆರ್ಥಿಕ ಭದ್ರತೆ, ಸಾಮಾಜಿಕ ಜೀವನ ಸಿಗುತ್ತದೆ. ನಿಜವಾದ ವಿದ್ಯಾವಂತ ಯಾವಾಗಲೂ ನಿರುದ್ಯೋಗಿ ಆಗಿರಲಿಕ್ಕೆ ಸಾಧ್ಯವಿಲ್ಲ. ಅಂಥ ನಿಜವಾದ ವಿದ್ಯಾವಂತರನ್ನಾಗಿ ಮಾಡುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ..

ಇಂದಿನ ದಿನಗಳಲ್ಲಿ ಮಠಗಳು, ಸ್ವಾಮಿಗಳು ಎಂದರೆಜನರಲ್ಲಿಅಸಹ್ಯ ಭಾವನೆ ಮೂಡುತ್ತದೆ.ಖಾವಿ ಧರಿಸಿದ ಸ್ವಾಮಿಗಳು ಭೋಗದ ಜೀವನ ನಡೆಸುತ್ತಾರೆ. ಆದರೆ, ಶಿವಕುಮಾರ ಸ್ವಾಮೀಜಿಯವರು ಖಾವಿ ತ್ಯಾಗದ ಸಂಕೇತಎಂದು ತಿಳಿದು ಕ್ರಾಂತಿಕಾರಕ ವ್ಯಕ್ತಿತ್ವ ಮೈಗೂಡಿಸಿಕೊಂಡು ಎಲ್ಲವನ್ನೂ ತ್ಯಜಿಸಿ ಸರಳ ಜೀವನ ನಡೆಸಿದವರು..

ಶ್ರೀಗಳವರು ವೈಜ್ನಾನಿಕ ಸತ್ಯಕ್ಕೂ, ಸಂಪ್ರದಾಯಗಳಲ್ಲಿರುವ ನಿಗೂಢ ಸತ್ಯಕ್ಕೂ ಸೇತುಪ್ರಾಯರು.ಇವರು ಹಳೆಯದು ಸುಳ್ಳೆಂದು, ಹೊಸದೆಲ್ಲ ಸತ್ಯವೆಂದು ಒಪ್ಪಿ ಹಳೆಯದನ್ನು ತಳ್ಳಿಹಾಕುವುದಿಲ್ಲ. ಅಂತಃಕರಣ ಶುದ್ಧಿಯಿಂದ ಮಾಡುವ ಅನೇಕ ಕ್ರಿಯೆಗಳು ಫಲಪ್ರದವಾಗುತ್ತವೆ ಎಂಬ ವಿಚಾರದಲ್ಲಿ ನಂಬಿಕೆಯುಳ್ಳವರು. ಶುದ್ಧಾಂತಃಕರಣದಿಂದ ಮಾಡುವ ಅನೇಕ ಕ್ರಿಯೆಗಳು ಶಿವನನ್ನು ಮುಟ್ಟುತ್ತವೆ. ಆಗ ಶಿವನು ಅನುಗ್ರಹಿಸುತ್ತಾನೆ ಎಂದೇ ಅವರ ನಂಬಿಕೆ.ಪ್ರತ್ಯಕ್ಷವೇ ಪ್ರಮಾಣವೆಂದು ಅವರು ನಂಬುವುದಿಲ್ಲ. ಕಣ್ಣಿಗೆ ಕಾಣದಿರುವುದು ವಿಶ್ವದಲ್ಲಿ ಬಹಳ ಇದೆ. ಅದು ಅನುಭವಕ್ಕೆ, ಹೃದಯಕ್ಕೆ ಗೋಚರಿಸುತ್ತದೆ. ಯಂತ್ರಧಾರಣೆಯ ವಿಚಾರದಲ್ಲಿ ವೈಜ್ಞಾನಿಕತೆಗಿಂತ ವೈಚಾರಿಕ ಚಿಂತನೆಗೆ ಪ್ರಾಮುಖ್ಯತೆ, ಅದರಲ್ಲಿ ಶ್ರೀಗಳವರಿಗೂ ನಂಬಿಕೆ, ಜನಕ್ಕೂತೃಪ್ತಿಇದೆ.

ಶರಣ ತತ್ವಗಳ ನೈಜ ಪ್ರತಿಪಾದಕರಿವರು
ಸಿದ್ದಗಂಗಾ ಡಾ.ಶ್ರೀ ಶಿವಕುಮಾರ ಸ್ವಾಮೀಜಿತಾವುಅಕ್ಷರ ಕಲಿಕೆ ಆರಂಭಿಸಿದ ದಿನದಿಂದಲೂ ಇಂದಿನ ವರೆಗೂ ಶರಣ ತತ್ವಗಳನ್ನು ಬಿಟ್ಟವರಲ್ಲ. ಬಸವಣ್ಣನವರ ಬದುಕನ್ನೇತಮ್ಮಜೀವನದ ಮಾರ್ಗದರ್ಶಕವನ್ನಾಗಿ ಮಾಡಿಕೊಂಡ ಶ್ರೀಗಳು..ಇಂದಿಗೂ ಶರಣತತ್ವ ಸಾರಿದವರು.

ಆಡದಲೆ ಮಾಡುವವ ರೂಢಿಯೊಳಗುತ್ತಮರು ಎಂಬುದನ್ನು ಸಿದ್ಧಗಂಗಾ ಶ್ರೀಗಳು ಸಾರಿದತತ್ವ, ಬದುಕುತ್ತಿರುವ ಪರಿಇಡೀ ವಿಶ್ವಕ್ಕೇ ಮಾದರಿ. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ ಎಂಬ ಬಸವಣ್ಣನವರ ವಚನ ಸಾರವನ್ನು ಚಾಚೂ ತಪ್ಪದೆ ಕಾರ್ಯರೂಪಕ್ಕಿಳಿಸಿದವರಲ್ಲಿ ಶ್ರೀಗಳು ಅಗ್ರಗಣ್ಯರು. ಸಿದ್ಧಗಂಗಾ ಶ್ರೀಗಳು ಈ ನಾಡಿನ ಅಪರೂಪದ ಅಚ್ಚರಿ.ತ್ರಿವಿಧದಾಸೋಹದ ಸಾಕಾರಮೂರ್ತಿ. ಪ್ರೀತಿ-ವಾತ್ಸಲ್ಯದ ಮಹಾಮೇರು.ಬಡವ-ಬಲ್ಲಿದರೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುವ ಸಮದರ್ಶಿ.ಜಾತಿ, ಮತ ಭೇದವಿಲ್ಲದೆ ತ್ರಿವಿಧದಾಸೋಹದಿಂದ ಜಗತ್ತಿನ ಜನರನ್ನೇ ಬೆರಗುಗೊಳಿಸಿದ ಶ್ರೀಗಳು, ಲಕ್ಷಾಂತರ ಜನರ ಬದುಕಿನ ನಂದಾದೀಪ. ¾ವಿಶ್ರಾಂತಿಯೆಂದರೆ ಗಂಟೆಗಟ್ಟಲೆ ಹಾಸಿಗೆ ಮೇಲೆ ಮಲಗಿ ನಿದ್ರಿಸುವುದಲ್ಲ. ಹರಟೆ ಬಿಟ್ಟು ಬೇಸರವಿಲ್ಲದೆ ಹಲವು ಕಾರ್ಯಗಳಲ್ಲಿ ತೊಡಗಿಕೊಳ್ಳುವುದು. ಕೆಲಸದ ಪಲ್ಲಟವೇ ವಿಶ್ರಾಂತಿ ಎನ್ನುತ್ತಿದ್ದರು.

ಸಿದ್ಧಗಂಗೆಯಲ್ಲಿ ಸಂಸ್ಕೃತ ಪಾಠ ಶಾಲೆಯಿಂದ ಆರಂಭವಾದ ಶಿಕ್ಷಣ ಯಜ್ಞ ನಿರಂತರವಾಗಿ ಮುಂದುವರಿದಿದೆ. ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಮಹಾವೃಕ್ಷವಾಗಿ ಬೆಳೆದಿದೆ. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ಅಭಿಯಾನ ಸಾಗಿದೆ. ಮಠದಲ್ಲಿಎಲ್ಲಜಾತಿಗೆ ಸೇರಿದ 10 ಸಾವಿರಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ. ಮಠದ ಮಕ್ಕಳಿಗೆ ಮಾತೃಪ್ರೀತಿತೋರುವ ಶ್ರೀಗಳು ಶಿಕ್ಷಣದ ಜತೆಗೆ ಸಂಸ್ಕೃ, ಸಂಸ್ಕಾರವನ್ನು ಹೇಳಿಕೊಡುತ್ತಿದ್ದಾರೆ. 130 ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಅಭಿಯಾನವನ್ನೇ ನಡೆಸುತ್ತಿದ್ದವರು. ಈ ಮೂಲಕ ಐತಿಹಾಸಿಕ ದಾಖಲೆಯನ್ನೇ ನಿರ್ಮಿಸಿದ್ದಾರೆ.

ಒಂದು ತುತ್ತು ಅನ್ನದ ಹಿಂದೆ ಸಾವಿರಾರು ಮಂದಿಯ ಶ್ರಮದ ಶಕ್ತಿಯ ಸಾಗರವೇ ನಿಂತಿದೆ. ಅದನ್ನು ಅರಿತಾಗಲೇ ಮನುಷ್ಯ ಮನುಷ್ಯನಾಗುವುದು ಎಂಬ ಶ್ರೀಗಳ ಮಾತು ಮಠದ ವಿದ್ಯಾರ್ಥಿನಿಲಯಗಳಲ್ಲಿ ಆಶ್ರಯ ಪಡೆದಿರುವ, ಅದರ ನೇತೃತ್ವದಲ್ಲಿಕಾರ್ಯಾಚರಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಲಕ್ಷಾಂತರ ವಿದ್ಯಾರ್ಥಿಗಳ ಮನದಾಳಕ್ಕಿಳಿದರೆ ಅದಕ್ಕಿಂತದೊಡ್ಡ ಸಾಧನೆ ಇನ್ನೊಂದಿಲ್ಲ.

ಶ್ರೀ ಸಿದ್ಧಗಂಗಾ ಮಠವು ಶರಣತತ್ತ್ವ ಪ್ರಯೋಗ ಶಾಲೆಯಾಗಿದ್ದು, ಶರಣರ ತತ್ತ್ವಾದರ್ಶಗಳು ಶ್ರೀಮಠದ ಎಲ್ಲ ಕಾರ್ಯಗಳಲ್ಲಿಯೂ ಪ್ರತಿಫಲಿತವಾಗುತ್ತವೆ. ಕಾಯಕ, ದಾಸೊಹ, ಸಮಾನತೆಯ ಸಾಮಾಜಿಕ ಕ್ರಿಯಾಶೀಲತೆಯೂ, ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಧಾರ್ಮಿಕ ಕ್ರಿಯಾಶೀಲತೆಯೂ ಇಲ್ಲಿನ ಚಿರಂತನ ಕಾರ್ಯಗಳಾಗಿದ್ದು ಇಲ್ಲಿ ವಿದ್ಯಾಬ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಮಠಕ್ಕೆ ಬಂದು ಹೋಗುವ ಭಕ್ತಾದಿಗಳಿಗೆ, ಶ್ರೀ ಮಠದಲ್ಲಿ ವೃತ್ತಿ ಮಾಡುವ ಸಕಲರಿಗೂ ಸಿದ್ಧಗಂಗಾಮಠವು ಶರಣತತ್ತ್ವ ಪ್ರಯೋಗ ಶಾಲೆಯಂತೆ ಕಾಣುವುದರಲ್ಲಿಆಶ್ಚರ್ಯವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ