ಚಿಲಿ ದೇಶದ ಉತ್ತರ-ಮಧ್ಯಭಾಗದಲ್ಲಿ ಇಂದು ಪ್ರಬಲ ಭೂಕಂಪ

ಸಾಂಟಿಯಾಗೋ, ಜ.20- ಚಿಲಿ ದೇಶದ ಉತ್ತರ-ಮಧ್ಯ ಭಾಗದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿ ಜನರು ತೀವ್ರ ಆತಂಕಕ್ಕೆ  ಒಳಗಾಗಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ಇದ್ದ ಭೂಕಂಪ ದಿಂದ ತಕ್ಷಣಕ್ಕೆ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.

1.32ರ ನಸುಕಿನಲ್ಲಿ ಕೊಕ್ವಿಂಬೋ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿತು. ಭೂಕಂಪದ ಕೇಂದ್ರ ಬಿಂದು ಭೂಗರ್ಭದ 53 ಕಿ.ಮೀ. ಆಳದಲ್ಲಿತ್ತು.ವಲ್‍ಪರೈಸೋ, ಒಹಿಗ್ಗಿನ್ಸ್, ಅಟಕಾಮಾ ಮತ್ತು ರಾಜಧಾನಿ ಸಾಂಟಿಯಾಗೋದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.

ಭೂಕಂಪ ದತೀವ್ರತೆಯಿಂದ ಸಹಸ್ರಾರು ಮನೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಚಿಲಿ-ವಿಶ್ವದಲ್ಲೇಅತಿ ಹೆಚ್ಚು ಭೂಕಂಪಕ್ಕೆ ಒಳಗಾಗುವ ದೇಶವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ