2019-20ನೇ ಸಾಲಿನ ಕೇಂದ್ರ ಬಜೆಟ್ಟಿನಲ್ಲಿ ಕೃಷಿ ಸಾಲ ಗುರಿ ಏರಿಕೆ

ನವದೆಹಲಿ, ಜ.20- ಪ್ರಧಾನಿ ನರೇಂದ್ರ ಮೋದಿ ನೇತೃತ್ವದಕೇಂದ್ರ ಸರ್ಕಾರ ಫೆಬ್ರವರಿ 1ರಂದು ಮಂಡಿಸಲಿರುವ 2019-20ನೇ ಸಾಲಿನ ಬಜೆಟ್‍ನಲ್ಲಿ ಕೃಷಿ ಸಾಲ ಗುರಿ 12 ಲಕ್ಷಕೋಟಿ ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಕಳೆದ ವಿತ್ತೀಯ ವರ್ಷಕ್ಕಿಂತ ಇದು ಶೇಕಡ 10ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿಕೇಂದ್ರ ಸರ್ಕಾರ ಕೃಷಿ ಸಾಲ ಗುರಿಯನ್ನು 11 ಲಕ್ಷಕೋಟಿ ರೂ.ಗಳಿಗೆ ನಿಗದಿಗೊಳಿಸಿದೆ.

ಕೇಂದ್ರ ಸರ್ಕಾರ ಪ್ರತಿ ವರ್ಷ ಕೃಷಿ ವಲಯಕ್ಕಾಗಿ ಸಾಲ ಗುರಿಯನ್ನು ಹೆಚ್ಚಿಸುತ್ತಿದೆ. ಈ ವರ್ಷವೂ ಸಹ ಅದು ಶೇಕಡ 10ರಷ್ಟು ಅಥವಾ ಒಂದು ಲಕ್ಷ ಕೋಟಿ ರೂ.ಗಳಷ್ಟು ಏರಿಕೆಯಾಗಲಿದೆ.2019-20ನೇ ಬಜೆಟ್‍ನಲ್ಲಿ 12 ಲಕ್ಷಕೋಟಿ ರೂ.ಗಳ ಕೃಷಿ ಸಾಲ ಗುರಿ ನಿಗದಿಯಾಗಲಿದೆ ಎಂದು ಉನ್ನತ ಮೂಲಗಳು ವಿವರಿಸಿವೆ.

ಕೃಷಿ ಸಾಲದ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಹೆಚ್ಚಾಗುತ್ತಿದೆ.ಪ್ರತಿ ವರ್ಷವೂ ಇದರಲ್ಲಿಏರಿಕೆಯಾಗುತ್ತಿದೆ. ಉದಾಹರಣೆಗೆ 2017-18ನೇ ಸಾಲಿನಲ್ಲಿ ರೈತರಿಕಗೆ 11.68 ಲಕ್ಷಕೋಟಿ ರೂ.ಗಳ ಮೌಲ್ಯದ ಸಾಲ ನೀಡಲಾಗಿತ್ತು.ಇದು ಆ ವರ್ಷ ನಿಗದಿಗೊಳಿಸಲಾಗಿದ್ದ 10 ಲಕ್ಷಕೋಟಿ ರೂ.ಗಳಿಗಿಂತಲೂ ಅಧಿಕ ಪ್ರಮಾಣದ್ದಾಗಿದೆ ಎಂದು ಮೂಲಗಳು ಹೇಳಿವೆ.

ಅದೇರೀತಿ 2016-17ರಲ್ಲಿ 10.66 ಲಕ್ಷಕೋಟಿ ರೂ.ಗಳಷ್ಟು ಬೆಳೆ ಸಾಲವನ್ನು ವಿತರಿಸಲಾಗಿತ್ತು.ಇದು ನಿಗದಿಗೊಳಿಸಲಾದ 9 ಲಕ್ಷಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಮೊತ್ತವಾಗಿದೆ.

ಅಧಿಕ ಕೃಷಿ ಇಳುವರಿ ಸಾಧನೆಗಾಗಿ ಸಾಲ ನೀಡಿಕೆಯ ಪ್ರಮುಖ ವಿಷಯವಾಗಿದೆ. ಅತ್ಯಧಿಕ ಬಡ್ಡಿದರಗಳಿಗಾಗಿ ಲೇವಾದೇವಿದಾರರಿಂದ ರೈತರು ಸಾಲ ಪಡೆಯುವುದನ್ನು ತಪ್ಪಿಸಲು ಸಾಂಸ್ಥಿಕ ಸಾಲ ಸೌಲಭ್ಯ ನೆರವಾಗುತ್ತದೆ.

ಸಾಮಾನ್ಯವಾಗಿ ಕೃಷಿ ಸಾಲಗಳಿಗೆ ವಾರ್ಷಿಕ ಶೇ.9ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಆದಾಗ್ಯೂ, ಕೇಂದ್ರ ಸರ್ಕಾರ ಕಡಿಮೆ ಬಡ್ಡಿದರ ಮತ್ತು ಕೃಷಿ ಇಳುವರಿ ಹೆಚ್ಚಳಕ್ಕೆ ನೆರವು ನೀಡಲು ಅಲ್ಪಾವಧಿ ಕೃಷಿ ಸಾಲವನ್ನುನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ವರ್ಷಕ್ಕೆ ಶೇ.7ರ ಬಡ್ಡಿದರದಲ್ಲಿ 3 ಲಕ್ಷ ರೂ.ಗಳವರೆಗೆ ಅಲ್ಪಾವಧಿ ಕೃಷಿ ಸಾಲ ಪಡೆಯಲು ಕೇಂದ್ರ ಸರ್ಕಾರ ಶೇ.2ರಷ್ಟು ಬಡ್ಡಿ ಸಹಾಯಧನವನ್ನು ಒದಗಿಸುತ್ತಿದೆ. ನಿಗದಿತ ಪಾವತಿ ದಿನಾಂಕದೊಳಗೆ ಸಾಲವನ್ನು ಸರಿಯಾಗಿ ಪಾವತಿಸುವ ಕೃಷಿಕರಿಗೆ ಹೆಚ್ಚುವರಿಯಾಗಿ ಶೇ.3ರಷ್ಟು ಪೆÇ್ರೀದರ ನೀಡುತ್ತಿದೆ.ಇದರಿಂದ ಬಡ್ಡಿದರವು ವಾರ್ಷಿಕ ಶೇ.4ರಷ್ಟು ಕಡಿಮೆಯಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ