ಸುಬ್ರಮಣ್ಯನಗರ ವಾರ್ಡ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು, ಜ.20- ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ಸುಬ್ರಮಣ್ಯನಗರ ವಾರ್ಡ್‍ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ಬಿಪಿ, ಮಹಿಳೆಯರಿಗೆ ಬ್ರೆ¸್ಟï ಕ್ಯಾನ್ಸರ್, ಕಣ್ಣು ಮತ್ತು ದಂತ ಪರೀಕ್ಷೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಬಿಬಿಎಂಪಿ ಸದಸ್ಯ ಹೆಚ್.ಮಂಜುನಾಥ್, ಆರೋಗ್ಯವೇ ಭಾಗ್ಯ ಆರೋಗ್ಯವೆ ಸಂಪತ್ತು.ಬೆಂಗಳೂರು ನಗರ ಇಂದು ಬೃಹದಾಕಾರವಾಗಿ ಬೆಳೆದು ಪರಿಸರ ನಾಶವಾಗಿ, ಕಾಂಕ್ರೀಟ್ ನಾಡಾಗಿದೆ.ಆರೋಗ್ಯದ ಬಗ್ಗೆ ತಾತ್ಸಾರ ಮನೋಭಾವನೆಯಿಂದಾಗಿಯೇ ಮನುಷ್ಯ ಆನಾರೋಗ್ಯಕ್ಕೀಡಾಗುತ್ತಿದ್ದಾನೆ ಎಂದರು.

ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕಾದ ಸಂದರ್ಭ ಬಂದಿದೆ.ಶ್ರೀಮಂತರಿಗೆ ಹಣ ಇರುತ್ತದೆ.ಆದರೆ, ಬಡ-ಮಧ್ಯಮ ವರ್ಗದವರಿಗೆ ವೈದ್ಯಕೀಯ ಶುಲ್ಕ ಭರಿಸಲು ಕಷ್ಟಸಾಧ್ಯ.ಇದನ್ನೆಲ್ಲ ಅರಿತು ಸುಬ್ರಮಣ್ಯ ನಗರ ವಾರ್ಡ್‍ನಲ್ಲಿ ಬಡ-ಮಧ್ಯಮ ವರ್ಗದವರು ಹೆಚ್ಚಾಗಿ ವಾಸಿಸುತ್ತಿರುವುದರಿಂದ ಅವರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸುಬ್ರಮಣ್ಯನಗರ ವಾರ್ಡ್‍ನಲ್ಲಿ ಪ್ರಥಮ ಬಾರಿಗೆ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಇಂದಿರಾ ಕ್ಲಿನಿಕ್ ಆರಂಭಿಸಲಾಯಿತು.ಕಡಿಮೆ ವೆಚ್ಚದಲ್ಲಿ ಕಾಯಿಲೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಆರೋಗ್ಯ ರಕ್ಷಣೆಗೆ ಪ್ರಮುಖವಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.ಉದ್ಯಾನವನದಲ್ಲಿ ಬಯಲು, ಒಳಾಂಗಣ ವ್ಯಾಯಾಮ ಶಾಲೆ ಮತ್ತು ಪರಿಸರಕ್ಕೆ ಉತ್ತಮವಾಗಿರಲು ಔಷಧಗುಣವುಳ್ಳ ಸಸಿಗಳನ್ನು ಬೆಳಸಲಾಗುತ್ತಿದೆ.ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಮೀಸಲಾದ ಉದ್ಯಾವವನ ಮತ್ತು ವ್ಯಾಯಾಮ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ