ತುಮಕೂರು, ಜ.19- ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡುಬಂದಿದೆ.ಸ್ವಂತಶಕ್ತಿಯಿಂದ ಶ್ರೀಗಳು ಉಸಿರಾಡಲು ಪ್ರಾರಂಭಿಸಿದ್ದಾರೆ.ಒಂದೂವರೆಗಂಟೆಗೂ ಹೆಚ್ಚು ಕಾಲ ವೆಂಟಿಲೇಟರ್ ಸಹಾಯವಿಲ್ಲದೆ ಶ್ರೀಗಳು ಸ್ವ ಶಕ್ತಿಯಿಂದಲೇ ಉಸಿರಾಟ ನಡೆಸಿದರೆಂದು ವೈದ್ಯರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸಿದ್ಧಗಂಗಾ ಮಠದಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿಯವರಿಗೆ ಶ್ರೀಗಳ ಆರೋಗ್ಯದ ಬಗ್ಗೆ ವಿವರಗಳನ್ನು ನೀಡಿದಅವರ ಆಪ್ತ ವೈದ್ಯರಾದಡಾ.ಪರಮೇಶ್‍ಅವರು, ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪಮಟ್ಟಿನಚೇತರಿಕೆಕಂಡುಬಂದಿದೆ. ಉಸಿರಾಟದ ಸಮಸ್ಯೆ ಹತೋಟಿಗೆ ಬಂದಿದೆ.ರಕ್ತತಪಾಸಣೆಯಲ್ಲಿ ಸೋಂಕಿನ ಅಂಶ ಕಡಿಮೆಯಾಗಿರುವುದುಕಂಡುಬಂದಿದೆಎಂದು ತಿಳಿಸಿದರು.
ಆಲ್ಟುಮಿನ್‍ರಿಕವರಿ ಆಗಲು ಎರಡು-ಮೂರು ವಾರ ಬೇಕಾಗುತ್ತದೆ.ಶ್ರೀಗಳ ದೇಹದಲ್ಲಿ ನೀರು ತುಂಬಿಕೊಳ್ಳುವುದು ಕ್ರಮೇಣಕಡಿಮೆಯಾಗುತ್ತಿದೆ.ಇಂದುಕಿರಿಯ ಶ್ರೀಗಳ ಜತೆಅವರು ಪೂಜೆ ಮಾಡಿದರು.ಇಂದಿನಿಂದ ವೆಂಟಿಲೇಟರ್ ಸಹಾಯವನ್ನು ಹಂತ ಹಂತವಾಗಿ ವಿನಾಫ್ ಮಾಡಲು ಪ್ರಯತ್ನ ಮಾಡಿದ್ದೇವೆಎಂದರು.
ಆಲ್ಟುಮಿನ್2.5 ಇದ್ದು, ಇಂದು ಮತ್ತೆಆಲ್ಟುಮಿನ್ ಪೆÇ್ರಟೀನ್ ನೀಡುತ್ತೇವೆ. ಶ್ರೀಗಳು ಪವಾಡರೀತಿಯಲ್ಲಿಚೇತರಿಕೆಕಾಣುತ್ತಿರುವುದು ನಮಗೆ ಸಂತಸತಂದಿದೆಎಂದುಡಾ.ಪರಮೇಶ್ ತಿಳಿಸಿದರು.
ಸಿದ್ಧಗಂಗಾ ಶ್ರೀಗಳಿಗೆ ಹಳೆಮಠದ ಪರಿಸರ ಈಗ ಆರೋಗ್ಯದ ಶಕ್ತಿಕೇಂದ್ರವಾಗಿ ಪರಿಣಮಿಸಿದೆ.ಸಿದ್ಧಗಂಗಾ ಆಸ್ಪತ್ರೆಯಿಂದ ಮಠಕ್ಕೆ ಬಂದ ನಂತರ ಮಕ್ಕಳು ಸೇರಿದಂತೆ ಭಕ್ತರುದರ್ಶನ ಪಡೆದ ಮೇಲೆ ಪವಾಡರೀತಿಯಲ್ಲಿಅವರಆರೋಗ್ಯದಲ್ಲಿಚೇತರಿಕೆಕಂಡುಬರುತ್ತಿರುವುದು ಭಕ್ತ ವಲಯದಲ್ಲಿ ಸಂತಸ ಮೂಡಿಸಿದೆ.
ದಿನ ಕಳೆದಂತೆ ಶ್ರೀಗಳ ಆರೋಗ್ಯದಲ್ಲಿಚೇತರಿಕೆಕಂಡುಬರುತ್ತಿರುವುದು ವೈದ್ಯರನ್ನು ಬೆರಗುಗೊಳಿಸಿದೆ.ಅಮೆರಿಕ ವೈದ್ಯರಾದ ನಾಗಣ್ಣ, ಜಯದೇವಆಸ್ಪತ್ರೆ ಹೆಸರಾಂತ ವೈದ್ಯರಾದ ಮಂಜುನಾಥ್, ತಮಿಳುನಾಡು ವೈದ್ಯರಾದರೇಲಾಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿಗಳಾದ ದೇವೇಗೌಡರು, ಮಾಜಿ ಮುಖ್ಯಮಂತ್ರಿಯಡಿಯೂರಪ್ಪ , ನೂರಾರು ಮಠಾಧೀಶರು ಭೇಟಿ ನೀಡಿ ಸ್ವಾಮೀಜಿಗಳು ಇಚ್ಛಾ ಮರಣಿಗಳು, ಅವರು ಪವಾಡ ಪುರುಷರು. ಅವರಿಗೆದೈವಶಕ್ತಿಇದೆ ಎಂಬ ಮಾತು ಈಗ ಸತ್ಯವಾಗುತ್ತಿದೆ.ದಿನೇ ದಿನೇ ಅವರು ಚೇತರಿಸಿಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.