ಬೆಂಗಳೂರು,ಜ.19- ಅತೃಪ್ತರ ರಾಜೀನಾಮೆ ಕುರಿತು ತಮಗೇನು ಗೊತ್ತಿಲ್ಲ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವೈಯಕ್ತಿಕ ಕೆಲಸದ ಮೇಲೆ ಊರಿನಲ್ಲಿದ್ದೇನೆ. ರಾಜೀನಾಮೆ ವಿಚಾರಗಳ ಕುರಿತು ತಮಗೇನು ಗೊತ್ತಿಲ್ಲ , ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ವಿಧಾನಸಭೆಯೊಳಗೆ ಏನು ನಡೆಯುತ್ತದೆಯೋ ಅದರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು, ಈ ವರೆಗೆ ಯಾರೂ ತಮ್ಮ ಬಳಿ ಸಮಯ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.