ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ 23ನೇ ಘಟಿಕೋತ್ಸವ

ಬೆಂಗಳೂರು, ಜ.19- ವಿಶ್ವ ವಿಖ್ಯಾತ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್)ಯ 23ನೆ ಘಟಿಕೋತ್ಸವದಲ್ಲಿ 39 ಮಂದಿಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಇಂದು ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಪದವೀಧರರಿಗೆ ಪ್ರಮಾಣ ಪತ್ರ ವಿತರಿಸಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ, ಸಂಸದ ಪಿ.ಸಿ.ಮೋಹನ್, ರಾಜ್ಯ ಸಭಾ ಸದಸ್ಯ ರಾಜೀವ್‍ಗೌಡ, ನಿಮ್ಹಾನ್ಸ್ನ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ಮತ್ತಿತರರು ಭಾಗವಹಿಸಿದ್ದರು.

ಈ ವರ್ಷ 192 ಮಂದಿಗೆ ಸ್ನಾತಕೋತ್ತರ ಪದವಿ, 39 ಮಂದಿಗೆ ಡಾಕ್ಟರೇಟ್, 29 ಮಂದಿಗೆ ಪೋಸ್ಟ್ ಡಾಕ್ಟರಲ್ ಫೆಲೋ, 22 ಡಿಎಂ, 24 ಎಂಡಿ, 9 ಎಂಸಿಎಚ್, 1ಎಂಪಿಎಚ್, 48 ಎಂಫಿಲ್, 10 ಎಂಎಸ್ಸಿ, 10 ಫೆಲೋಶಿಫ್, 13 ಮಂದಿ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ನೀಡಲಾಯಿತು.

ಈ ವೇಳೆ ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ಮಾತನಾಡಿ, ನಿಮ್ಹಾನ್ಸ್ನಲ್ಲಿ ವಿದ್ಯಾರ್ಥಿಗಳು ಅತ್ಯಂತ ಶ್ರದ್ಧೆಯಿಂದ ಕಲಿತು ಪದವಿ ಪಡೆಯುತ್ತಿದ್ದಾರೆ ಎಂದು ಹೇಳಿದರು.

48 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನಿಮ್ಹಾನ್ಸ್ ಕಳೆದ ಐದು ವರ್ಷದಿಂದ ರಾಷ್ಟ್ರೀಯ ಪ್ರಾಮುಖ್ಯತೆ ಘನತೆಯನ್ನು ನಿರಂತರವಾಗಿ ಪಡೆಯುತ್ತಿದೆ ಎಂದರು.
ತಮಿಳುನಾಡು ಅಲ್ಲಿನ ಐದು ಲಕ್ಷ ಪೋಲೀಸರಿಗೆ ಮಾನಸಿಕ ಶಕ್ತಿ ಹೆಚ್ಚಿಸುವ ತರಬೇತಿ ಕಾರ್ಯಕ್ರಮದ ಜವಾಬ್ದಾರಿ ಒಪ್ಪಿಕೊಂಡಿದೆ. ಇದಕ್ಕಾಗಿ 450 ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.ಇದೇ ರೀತಿ ಪ್ಯಾರಾ ಮಿಲಿಟರಿಗೂ ಮಾನಸಿಕ ಕ್ಷಮತೆಯ ತರಬೇತಿ ನೀಡಲು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ನಿಮ್ಹಾನ್ಸ್ ತನ್ನ ಡಿಜಿಟಲ್ ಅಕಾಡೆಮಿಯನ್ನು ಕಳೆದ ಜುಲೈನಲ್ಲಿ ಉದ್ಘಾಟಿಸಿದ್ದು, ಈವರೆಗೂ 500 ಮಂದಿಯನ್ನು ಅನ್‍ಲೈನ್‍ನಲ್ಲಿ ತರಬೇತುಗೊಳಿಸಲಾಗಿದೆ. ಇನ್ನಷ್ಟು ಮಂದಿ ಅನ್‍ಲೈನ್ ಶಿಕ್ಷಣಕ್ಕಾಗಿ ಸರದಿ ಸಾಲಿನ ಕಾಯುತ್ತಿದ್ದಾರೆ ಎಂದು ಹೇಳಿದರು.

ನಿಮ್ಹಾನ್ಸ್ ಸಂಸ್ಥೆ ರಾಷ್ಟ್ರದಲ್ಲೆ ಉತ್ತಮಸೇವಾ ಸಂಸ್ಥೆ ಎಂದು ಗುರುತಿಸಿಕೊಂಡಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ