ಬೆಂಗಳೂರು, ಜ.19- 3ನೇ ಫೆಬ್ರವರಿಯಂದು ನಡೆಯಬೇಕಾಗಿದ್ದ ಪೊಲೀಯೋ ಲಸಿಕಾ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಭಾರತ ಸರ್ಕಾರದ ಉಪ ಆಯುಕ್ತರು ಈ ಕುರಿತು ಪತ್ರ ಬರೆದಿದ್ದಾರೆ.ಆದುದರಿಂದ 3ನೇ ಫೆಬ್ರವರಿಯಂದು ನಡೆಯಬೇಕಾಗಿದ್ದ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಭಾರತ ಸರ್ಕಾರದಿಂದ ಆದೇಶ ಬಂದ ನಂತರ ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.