ಆದಿಚುಂಚನಗಿರಿ, ಜ.19-ಗುರು ಹಿರಿಯರ ಆಶೀರ್ವಾದ ಇರುವವರೆಗೂ ತಮಗೆ ಯಾರೂ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಚೆನ್ನಾಗಿಯೇಇರುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಆದಿಚುಂಚನಗಿರಿಯ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 74ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇರೀತಿಯಲ್ಲಿ ಪರಮ ಪೂಜ್ಯರನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ಪ್ರಸ್ತುತರಾಜಕೀಯ ಸಂದರ್ಭದಲ್ಲಿಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಹೆಸರನ್ನುಎಂದು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಯೊಬ್ಬರೂ ನೆಮ್ಮದಿಯ ಬದುಕು ರೂಪಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶ್ರೀ ಮಠದ ಹೆಸರಿಗೆ ಕಳಂಕ ತರುವ ಕೆಲಸವನ್ನುಯಾರೂ ಮಾಡಬಾರದೆಂದು ಕರೆ ನೀಡಿದರು.
ಮಂಡ್ಯಜಿಲ್ಲೆಜನತೆ ನಮಗೆ ಶಕ್ತಿಯನ್ನುತುಂಬಿದ್ದಾರೆ ಎಂದ ಅವರು, ರೈತರನ್ನು ಉಳಿಸಬೇಕೆಂಬ ಉದ್ದೇಶದಿಂದ ಜನರು ನೀಡಿರುವ ಶಕ್ತಿಯನ್ನು ಜನರಿಗೇಧಾರೆ ಎರೆಯುತ್ತಿರುವುದಾಗಿ ತಿಳಿಸಿದರು.
ಮೈ ಷುಗರ್ ಸಕ್ಕರೆಕಾರ್ಖಾನೆ ನಶಿಸಿ ಹೋಗಬಾರದು ಎಂಬ ಉದ್ದೇಶದಿಂದ ಮಂಡ್ಯದಲ್ಲಿ ನೂತನ ಸಕ್ಕರೆಕಾರ್ಖಾನೆ ಸ್ಥಾಪಿಸಲು ನಿರ್ಧರಿಸಲಾಗಿದೆ. ನಾಶವಾದ ಪ್ರತಿತೆಂಗಿನ ಮರಕ್ಕೆ 400 ರೂ.ಗಳಂತೆ ಎಕರೆಗೆ 20 ಸಾವಿರರೂ. ನೀಡಲುತೀರ್ಮಾನಿಸಲಾಗಿದೆಎಂದರು.
ಆದಿಚುಂಚನಗಿರಿ ಮಠದಕೀರ್ತಿಯನ್ನು ವಿಶ್ವಮಟ್ಟಕ್ಕೆ ಡಾ.ಶ್ರೀ ಬಾಲಗಂಗಾಧರನಾಥಸ್ವಾಮೀಜಿಯವರು ಕೊಂಡೊಯ್ದಿದ್ದಾರೆ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಅಪರಿಮಿತ ಜ್ಞಾನವಂತರುಆಗಿರುವುದು ನಮಗೆ ಹೆಮ್ಮೆಯನ್ನುಂಟು ಮಾಡಿದೆ ಎಂದರು.
ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ನಾವು ಕಣ್ಣಾರೆಕಂಡಿರುವ ಪವಾಡ ಪುರುಷರು.ಸಿದ್ಧಿ ಶಕ್ತಿಯನ್ನು ಹೊಂದಿದವರುಎಂದು ಶ್ಲಾಘಿಸಿದರು.
ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಮಾತೃ ಹೃದಯದವರಾಗಿದ್ದು, ರೈತಾಪಿ ವರ್ಗದ ಸಾಲ ಮನ್ನಾ ಮಾಡುತ್ತಿದ್ದಾರೆ ಎಂದರು.
ಹೃದಯವಂತ ಮುಖ್ಯಮಂತ್ರಿಯೊಬ್ಬರು ಈ ನಾಡಿಗೆದೊರೆತಿರುವುದು ನಮ್ಮ ಸುದೈವ. ಇಡೀದೇಶತಿರುಗಿ ನೋಡುವಂತಹ ಸಾಧನೆಯನ್ನು ನಾಡಿನಲ್ಲಿ ಮುಖ್ಯಮಂತ್ರಿ ಮಾಡುತ್ತಾರೆ ಎಂಬುದರಲ್ಲಿಅನುಮಾನವಿಲ್ಲ ಎಂದರು.
ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ, ಮಾದಾರಚೆನ್ನಯ್ಯಗುರುಪೀಠದ ಶ್ರೀಡಾ.ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಶ್ರೀ ಡಾ.ಪ್ರಕಾಶನಾಥಸ್ವಾಮೀಜಿ, ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಶ್ರೀ ಪ್ರಸನ್ನನಾಥಸ್ವಾಮೀಜಿ, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಕೆ.ಸುರೇಶ್ಗೌಡ, ಅನಿತಾಕುಮಾರಸ್ವಾಮಿ ಪಾಲ್ಗೊಂಡಿದ್ದರು.






