ಕಾಫಿ ಕುಡಿದು ಅಸ್ವಸ್ಥಗೊಂಡ ತಾಯಿ ಮಗಳ ಸಾವು

ಬಾಗೇಪಲ್ಲಿ, ಜ.19- ಪ್ರಸಾದ ವಿಷವಾಯಿತು… ನೀರು ವಿಷವಾಯಿತು… ಈಗ ಆಹಾರ ವಸ್ತುಗಳಲ್ಲೂ ಕೂಡ ವಿಷ ಬೆರೆಸುವ ಹೀನ ಕೃತ್ಯ ನಡೆದಿರುವ ಶಂಕೆ ಇಲ್ಲಿ ನಡೆದಿದೆ.

ತಾಲೂಕಿನ ಬತ್ತಲಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿಅಂಗಡಿಯಿಂದಕಾಫಿಪುಡಿತಂದು ಮನೆಯಲ್ಲಿಕಾಫಿ ಮಾಡಿಕುಡಿದ ನಂತರಇಡೀಕುಟುಂಬವೇ ಅಸ್ವಸ್ಥಗೊಂಡುತಾಯಿ-ಮಗಳು ಮೃತಪಟ್ಟಿರುವದುರಂತಘಟನೆ ನಡೆದಿದೆ.

ಅಕ್ಕುಲಮ್ಮ (80) ಹಾಗೂ ನರಸಮ್ಮ (60) ಮೃತಪಟ್ಟತಾಯಿ-ಮಗಳಾಗಿದ್ದು, ಮೊಮ್ಮಕ್ಕಳಾದ ಅರವಿಂದ (7), ಆರತಿ (4) ಆರೋಗ್ಯದಲ್ಲಿಏರುಪೇರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಿ ನಂತರಜಿಲ್ಲಾಸ್ಪತ್ರೆಗೆದಾಖಲಿಸಲಾಗಿದೆ.]ಗ್ರಾಮದಅಂಗಡಿಯೊಂದರಲ್ಲಿ ನಿನ್ನೆ ಮಕ್ಕಳಿಗೆ ದುಡ್ಡುಕೊಟ್ಟುಕಾಫಿ ಪುಡಿ ತರುವಂತೆ ನರಸಮ್ಮ ಕಳುಹಿಸಿದ್ದರು. ಅದರಂತೆ ಸಂಜೆ 7 ಗಂಟೆಗೆಎಲ್ಲರೂ ಖುಷಿಯಾಗಿಯ ಕಾಫಿ ಮಾಡಿ ಸೇವಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಹೊಟ್ಟೆನೋವು ಕಾಣಿಸಿಕೊಂಡು ವಾಂತಿ ಮಾಡಿದ್ದಾರೆ. ಇಡೀಕುಟುಂಬದ ಒಬ್ಬೊಬ್ಬರೇ ಅನಾರೋಗ್ಯ ಕ್ಕೀಡಾದ ತಕ್ಷಣ ಅಕ್ಕಪಕ್ಕದವರು ಆತಂಕಗೊಂಡು ತಕ್ಷಣ ನೆರವಿಗೆ ಬಂದಿದ್ದಾರೆ.

ಅಷ್ಟರಲ್ಲೇತಾಯಿ-ಮಗಳು ಮೃತಪಟ್ಟಿದ್ದು, ಮಕ್ಕಳು ಒದ್ದಾಡುತ್ತಿದ್ದನ್ನುಕಂಡುತಕ್ಷಣಅವರನ್ನುಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಂಗಡಿಯಿಂದ ತಂದ ಕಾಫಿಪುಡಿ ಹಳೆಯದಾಗಿತ್ತೇ ಅಥವಾ ಇದಕ್ಕೆ ವಿಷ ಬೆರೆಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಬಾಗೇಪಲ್ಲಿಠಾಣೆ ಪೆÇಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸ್ಥಳಕ್ಕೆ ಎಸ್‍ಪಿ ಕಾರ್ತಿಕ್‍ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಮನೆಯಲ್ಲಿ ಉಳಿದಿದ್ದ ಕಾಫಿಯನ್ನು ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ