ಬೆಂಗಳೂರು, ಜ.15- ದೆಹಲಿಗೆ ಹೋಗಿ ಬಂದಿದ್ದ ನಾಲ್ವರು ಬಿಜೆಪಿ ಶಾಸಕರಿಗೆ ತಕ್ಷಣವೇ ವಾಪಸ್ ದೆಹಲಿಗೆ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜತೆ ಚರ್ಚೆ ನಡೆಸಲು ಬಿಜೆಪಿಯ ಎಲ್ಲಾ 104 ಶಾಸಕರು, ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದರು. ಇವರಲ್ಲಿ ನಾಲ್ವರು ಶಾಸಕರು ವೈಯಕ್ತಿಕ ಕಾರಣ ಹೇಳಿ ಕರ್ನಾಟಕಕ್ಕೆ ವಾಪಸ್ ಬಂದಿದ್ದರು ಎನ್ನಲಾಗಿದೆ.
ಸದ್ಯ ಆಪರೇಷನ್ ಕಮಲಕ್ಕೆ ಪ್ರತಿತಂತ್ರ ಹೆಣೆಯಲು ಮೈತ್ರಿ ಪಕ್ಷಗಳು ಸಜ್ಜಾದ ಹಿನ್ನೆಲೆಯಲ್ಲಿ ಯಡಿಯೂರಪ್ಪ, ದೆಹಲಿಯಿಂದ ಬಂದ ನಾಲ್ವರು ಶಾಸಕರಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ದೆಹಲಿಗೆ ವಾಪಸ್ ಬರುವಂತೆ ಸೂಚಿಸಿದ್ದಾರೆ.
ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ, ಹಾವೇರಿ ಶಾಸಕ ಸಿ.ಎಂ. ಉದಾಸಿ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ರವೀಂದ್ರನಾಥ್ ಮತ್ತು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ವೈಯಕ್ತಿಕ ಕಾರಣ ನೀಡಿ ಕರ್ನಾಟಕಕ್ಕೆ ವಾಪಸಾಗಿದ್ದರು.
ಆಪರೇಷನ್ ಕಮಲಕ್ಕೆ ಸಿಎಂ ಪ್ರತಿತಂತ್ರ ರೂಪಿಸುತ್ತಿರೋ ಹಿನ್ನೆಲೆ, ಬಿಎಸ್ವೈ ಈ ನಾಲ್ವರು ಶಾಸಕರಿಗೆ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.