ನವದೆಹಲಿ: ಸಾಮಾನ್ಯ ವರ್ಗದ ಬಡಜನರಿಗೆ ಶೇ.10 ಮೀಸಲು ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿಗೊಂಡು, ರಾಷ್ಟ್ರಪತಿಯಿಂದಲೂ ಅಂಕಿತಬಿದ್ದ ಬಳಿಕ ಜ.14ರಿಂದಲೇ ಈ ನೀತಿ ದೇಶಾದ್ಯಂತ ಜಾರಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಜ.14ರಿಂದಲೇ ಕೇಂದ್ರ ಸರ್ಕಾರದ ಎಲ್ಲ ನೇಮಕ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಶೇ.10ರ ಮೀಸಲು ಅನ್ವಯವಾಗಲಿದೆ.
ಈ ಆದೇಶಗಳನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿಕೊಡಲಾಗಿದ್ದು, ಆಯಾ ಮುಖ್ಯ ಕಾರ್ಯದರ್ಶಿಗಳು ಮಾರ್ಗಸೂಚಿ ಆಧರಿಸಿ ನಿಯಮ ರಚಿಸಿ ಅಧಿಸೂಚನೆ ಹೊರಡಿಸಬೇಕಿದೆ.
general-category-central-govt-reservation-poor-people-naredra-modi