ನವದೆಹಲಿ,ಜ.14- ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯುವುದಿಲ್ಲ . ಅತೃಪ್ತರು ಸರ್ಕಾರದಿಂದ ಹೊರ ಬಂದ ಮೇಲೆ ನಾವು ಸರ್ಕಾರ ರಚನೆ ಮಾಡುವ ಬಗ್ಗೆ ಚಿಂತಿಸುತ್ತೇವೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಕಾರ್ಯವೈಖರಿಯಿಂದ ಕೆಲವರು ಬೇಸತ್ತಿದ್ದಾರೆ. ಇದರಿಂದ ಹಲವು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಯಾರು ರಾಜೀನಾಮೆ ನೀಡುತ್ತಾರೆ, ಎಷ್ಟು ಜನ ನೀಡುತ್ತಾರೆ ಎಂಬುದನ್ನು ನೋಡುತ್ತೇವೆ. ಆನಂತರ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ನಾವು ಶಿಸ್ತಿನ ಸಿಪಾಯಿಗಳು. ನಮ್ಮ ರಾಜ್ಯಾಧ್ಯಕ್ಷರು ದೆಹಲಿಯಲ್ಲೇ ಇರಿ ಎಂದರೆ ಇರುತ್ತೇವೆ. ಬೆಂಗಳೂರಿಗೆ ಹೊರಡಿ ಎಂದರೆ ಹೊರಡುತ್ತೇವೆ. ಮೈತ್ರಿ ಸರ್ಕಾರದ ಬಗ್ಗೆ ಜನರಿಗೆ ನಂಬಿಕೆ ಇಲ್ಲ. ಶಾಸಕರಿಗೆ ವಿಶ್ವಾಸವಿಲ್ಲದಂತಾಗಿದೆ ಎಂದರು.