ಸರ್ಕಾರದಿಂದ ಅಂಧ ಮಕ್ಕಳ ಕಲ್ಯಾಣಕ್ಕೆ ನೆರವು

ಬೆಂಗಳೂರು : ಅಂಧ ಮಕ್ಕಳ ಕಲ್ಯಾಣಕ್ಕೆ ಸರ್ಕಾರದಿಂದ ಅಗತ್ಯ ನೆರವು ಕೊಡಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಇಂದಿಲ್ಲಿ ಭರವಸೆ ನೀಡಿದರು.
ಶ್ರೀ ರಾಕುಂ ಅಂಧರ ಶಾಲೆಯ 21ನೆ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದು ಕುಟುಂಬದಲ್ಲಿ ಒಂದು ಮಗುವನ್ನು ಪೆÇೀಷಣೆ ಮಾಡುವುದೇ ಕಷ್ಟ.ಅಂಥದ್ದರಲ್ಲಿ ಸಾವಿರ ಅಂಗವೈಕಲ್ಯ ಮತ್ತು ಅಂಧ ಮಕ್ಕಳನ್ನು ಸಾಕಿ ಸಲಹುತ್ತಿರುವ ಶ್ರೀ ರಾಕುಂ ಶಾಲೆಯ ಕಾರ್ಯ ಶ್ಲಾಘನೀಯ ಎಂದರು.
ಇಂತಹ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಲವಾರು ವಿದ್ಯಾರ್ಥಿಗಳು ಐಎಎಸ್ ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಹೀಗಾಗಿ ಅಂಧ ಮಕ್ಕಳ ಕಲ್ಯಾಣಕ್ಕಾಗಿ ನೆರವು ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರೊಂದಿಗೆ ಚರ್ಚಿಸಿ ಅಗತ್ಯ ನೆರವು ನೀಡಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಹಾಗೂ ಐಎಎಸ್ ತರಬೇತಿ ಪಡೆಯುತ್ತಿರುವ ಅಂಧ ಯುವಕ ಸದಾನಂದ ಮತ್ತು ಕೆಎಎಸ್ ತರಬೇತಿ ಪಡೆಯುತ್ತಿರುವ ಅಂಧ ಬಾಲಕಿ ಕುಮಾರಿ ಭವ್ಯಾ ಆವರನ್ನು ಸ್ವಾಗತಿಸಲಾಯಿತು.
ಅಂಧ ಮತ್ತು ಸಾಮಾನ್ಯ ಮಕ್ಕಳು ನಡೆಸಿಕೊಟ್ಟ ಪರಿಸರ, ಶಿಕ್ಷಣ ಮತ್ತು ಜೀವಜಲದ ನಾಟಕ ನೋಡುಗರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ವಿ.ವೆಂಕಟೇಶ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಜೆ.ಅಲೆಗ್ಸಾಂಡರ್, ವಿಜಯ್ ಗೋರೆ, ಐಆರ್‍ಎಸ್ ಅಧಿಕಾರಿ ನೂತನ್ ಒಡೆಯರ್, ಐಎನ್‍ಟಿಯುಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ವೆಂಕಟೇಶ್, ಬಿಗ್‍ಬಾಸ್ ಖ್ಯಾತಿಯ ನಟ ಸಂತೋಷ್, ಶ್ರೀ ರಾಕುಂ ಶಾಲೆಯ ವ್ಯವಸ್ಥಾಪಕ ಟ್ರಸ್ಟಿ ಆಚಾರ್ಯ ಶ್ರೀ ರಾಕುಂಜೀ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ