ಬಾಗಲಕೋಟ:ಲೋಕಾಪುರದ ವಿದ್ಯಾಚೇತನ ಪ್ರಾಥಮಿಕ ಶಾಲೆಯಲ್ಲಿ “ವೀರಭದ್ರೇಶ್ವರ ಇನಸ್ಟಿಟ್ಯೂಟ ಅಫ್ ಮಿಡ್ ಬ್ರೇನ್”ನ ಉದ್ಘಾಟನೆ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನೆರವೇರಿತು. ಶ್ರೀ ಕ್ಷೇತ್ರ ಜ್ಞಾನೇಶ್ವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳ ಆಶೀರ್ವಾದಗಳೊಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕಮಲಾಬಾಯಿ ಯ ಹೊರಟ್ಟಿಯವರು ಉದ್ಘಾಟನೆ ಮಾಡಿದರು.ಶ್ರೀ ಬಸವರಾಜ ಬಿರಾದಾರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ಶ್ರೀಮತಿ ಜ್ಯೋತಿ ಬಿರಾದಾರ ಅವರು ಅಥಿತಿಗಳನ್ನು ಸ್ವಾಗತಿಸಿದರು.
ಡಾ. ಬಸವರಾಜ ಹಿರೇಮಠ,ಎಸ್ ಎಮ್ ರಾಮದುರ್ಗ ,ಸಿದ್ದು ಹೂಗಾರ ಜೆ ಎಲ್ ಮಾರಂಗಪ್ಪನವರ್ ಉಪಸ್ಥಿತರಿದ್ದರು.ಶ್ರೀ ವಿವೇಕ ಮುರಾರಿಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮಗಳಲ್ಲಿ ಏಷಿಯನ್ ಇನಸ್ಟಿಟ್ಯೂಟ ಅಫ್ ಮಿಡ್ ಬ್ರೇನ್ ಬಾಗಲಕೋಟೆಯ ವಿದ್ಯಾರ್ಥಿ ಗಳಾದ ಕುಮಾರಿ ವೈಷ್ಣವಿ ಕುರಿ,ಮಾಸ್ಟರ್ ಪ್ರೀತಮ್ ಕಂದಕೂರ ಮತ್ತು ಕುಮಾರಿ ಗಾಯತ್ರಿ ಅಮರಿ ಇವರು ನೆನಪಿನ ಶಕ್ತಿ ,ಏಕಾಗ್ರತೆ ಯ ಅದ್ಬುತ ಪ್ರದರ್ಶನ ನೀಡಿದರು.ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಲವಾರು ವಿಧದ ರೂಬಿಕ್ ಕ್ಯೂಬ್ (ಪಜಲ್) ಗಳನ್ನು ಸುಲಭವಾಗಿ ಕೂಡಿಸಿದರು ಜೊತೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಣ್ಣ ,ಅಕ್ಷರ ಮತ್ತ ಎಸ್ ಎಮ್ ಎಸ್ ಓದಿದರು. ಇವರ ಜೊತೆ ತರಬೇತುದಾರರಾದ ಆನಂದ ವಾಯ್, ಭೀಮಸೇನ ಗೋವೇಕರ ಮತ್ತು ಎಸ್ ಆರ್ ಗಣಿ ಉಪಸ್ಥಿತರಿದ್ದರು.