
ನವದೆಹಲಿ: ಲೋಕಸಭಾ ಚುನಾವಣೆ 1761ರಲ್ಲಿ ಮರಾಠ ಹಾಗೂ ಅಫ್ಘಾನರ ನಡುವೆ ನಡೆದಿದ್ದ ಮೂರನೇ ಪಾಣಿಪತ್ ಕದನವಿದ್ದಂತೆ.ಈ ಚುನಾವಣೆಯನ್ನು ಬಿಜೆಪಿ ಗೆಲ್ಲಲೇಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಾಘಟಬಂದನ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ರಾಜಕೀಯ ಎಂಬುದು ರಾಸಾಯನಶಾಸ್ತ್ರದಂತೆ , ಭೌತಶಾಸ್ತ್ರದಂತೆ ಅಲ್ಲ, ಉತ್ತರ ಪ್ರದೇಶದಲ್ಲಿ 2014ರ ಸಾಧನೆ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರನೇ ಪಾಣಿಪತ್ ಕದನಕ್ಕೂ ಮುನ್ನ ಮರಾಠರು 131 ಯುದ್ದಗಳಲ್ಲಿ ಗೆಲುವು ಸಾಧಿಸಿ ಉತ್ತುಂಗ ಶಿಖರಕ್ಕೇರಿದರು. ನಂತರ. ಭಾರತವನ್ನು 200 ವರ್ಷಗಳವರೆಗೆ ಗುಲಾಮರನ್ನಾಗಿ ಮಾಡಲಾಯಿತು. 2019 ಚುನಾವಣೆ ಸೈದ್ಧಾಂತಿಕ ಯುದ್ಧವಾಗಿದೆ. ಇದು ದಶಕಗಳವರೆಗೆ ಪರಿಣಾಮವನ್ನು ಬೀರುತ್ತದೆ, ಆದ್ದರಿಂದ ಚುನಾವಣೆಯಲ್ಲಿ ಗೆಲ್ಲಲೇಬೇಕಾಗಿದೆ ಎಂದರು.
ಮೇಲ್ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಶೇ, 10 ರಷ್ಟು ಮೀಸಲಾತಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೆರಿಗೆಯಲ್ಲಿ ವಿನಾಯಿತಿ, ಮೋದಿ ಸರ್ಕಾರದ ಅಭಿವೃದ್ಧಿ ಸಾಧನೆಗಳ ಬಗ್ಗೆ ಗುಣಗಾನ ಮಾಡಿದರು.