
ಬೆಂಗಳೂರು,ಜ.11- ಸಿನಿಮಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಫುಟ್‍ಪಾತ್‍ನಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಎಸ್.ಗಾರ್ಡನ್ ನಿವಾಸಿ ಗಣೇಶ್(53) ಮೃತಪಟ್ಟಿರುವ ವ್ಯಕ್ತಿ.
ನಿನ್ನೆ ಸಂಜೆ ಓಟಿಸಿ ರಸ್ತೆಯಲ್ಲಿರುವ ಶಾರದ ಚಿತ್ರಮಂದಿರದಲ್ಲಿ ಸೆಕೆಂಡ್ ಶೋನಲ್ಲಿ ಸಿನಿಮಾ ವೀಕ್ಷಿಸಲು ಗಣೇಶ್ ತೆರಳಿದ್ದರು.ಪ್ರದರ್ಶನ ಮುಗಿಸಿಕೊಂಡು ರಾತ್ರಿ ಮನೆಗೆ ನಡೆದು ಹೋಗುತ್ತಿದ್ದಾಗ ಚಿತ್ರಮಂದಿರ ಸಮೀಪದ ಜ್ಯೂಸ್ ಅಂಗಡಿ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.