ನಾಟಕ ರೂಪದಲ್ಲಿ ದಾಖಲಾದ ಸಂಪೂರ್ಣ ಸೀತಾ ಕಥಾ ವೃತ್ತಾಂತ

ಬೆಂಗಳೂರು,ಜ.11-ವಾಲ್ಮೀಕಿ ರಾಮಾಯಣ ಆಧಾರಿತ ಜನಕ ಜಾತೆ ಜಾನಕಿ ಭಾರತೀಯ ರಂಗಭೂಮಿಯ ಮೂರು ಹೊಸ ದಾಖಲೆಗಳನ್ನು ಸರಿಗಟ್ಟಿದ ಏಕವ್ಯಕ್ತಿ ನಾಟಕವಾಗಿದ್ದು, ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸ್ಥಾನ ಪಡೆದಿದೆ.

ಸಂಪೂರ್ಣ ಸೀತಾ ಕಥಾ ವೃತ್ತಾಂತವನ್ನು ಪ್ರಪ್ರಥಮವಾಗಿ ನಾಟಕ ರೂಪದಲ್ಲಿ ದಾಖಲಿಸಲಾಗಿದೆ.ರಂಗಬದುಕು ಟ್ರಸ್ಟ್ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ರಂಗಕರ್ಮಿ ಮತ್ತು ಮಾಧ್ಯಮ ಧುರೀಣ ಡಾ.ಎಸ್.ಎಲ್.ಎನ್. ಸ್ವಾಮಿಯವರು ಅಧ್ವೈತ ವಾಚಸ್ಪತಿ ಡಾ. ಪಾವಗಡ ಪ್ರಕಾಶ್ ರಾಯರ ಮಾರ್ಗದರ್ಶನದಲ್ಲಿ ರಚಿಸಿ ನಿರ್ದೇಶನ ಮಾಡಿದ ಈ ನಾಟಕವನ್ನು ವೃತ್ತಿ ರಂಗಭೂಮಿಯ ಹಿರಿಯ ನಟಿ ಹೆಲನ್ ಮೈಸೂರು ತಮ್ಮ ಅಮೋಘ ಅಭಿನಯದಿಂದ 111 ಪಾತ್ರಗಳನ್ನು ನಿರ್ವಹಿಸಿ ಯಶಸ್ವಿಯಾಗಿದ್ದಾರೆ.

ಇಡೀ ರಾಮಾಯಣವನ್ನು ಸಂಕ್ಷಿಪ್ತವಾಗಿ ಹೇಳುವ ಪ್ರಯತ್ನ ಮಾಡಿರುವ ನಟಿ ಹೆಲನ್ ಅವರ ಈ ರಂಗ ಪ್ರಯೋಗ ಸುದೀರ್ಘ ಸಮಯ ಅಂದರೆ 2 ಗಂಟೆ 47 ನಿಮಿಷಗಳಷ್ಟು ವಿಸ್ತಾರವಾದ ಏಕವ್ಯಕ್ತಿ ನಾಟಕವಾಗಿ ದಾಖಲೆ ನಿರ್ಮಿಸಿದೆ.

ಸೀತೆಯ ಕಥೆ, ಅವಳ ವಂಶವೃಕ್ಷ ಆಕೆಯ ಮನಸ್ಥಿತಿ, ಭಾವನೆಗಳು , ಪ್ರಶ್ನೆಗಳು, ಪ್ರತಿಕ್ರಿಯೆ ಎಲ್ಲವನ್ನು ಸಾಕ್ಷೀಕರಿಸುವ ಭಾರತ ರಂಗಭೂಮಿಯಲ್ಲಿ ಇದೊಂದು ವಿಶಿಷ್ಟ ಪ್ರಯೋಗ ಎನಿಸಿದೆ.

ಕನ್ನಡ ರಂಗಭೂಮಿಯ ಶಕ್ತಿ ಪ್ರದರ್ಶನ ಮತ್ತು ಮಹಿಳಾ ಅಭಿವ್ಯಕ್ತಿಯ ವಿರಾಟ್ ಸ್ವರೂಪದ ಪ್ರಯೋಗ ಎಂಬುದು ಹೆಮ್ಮೆಯ ಸಂಗತಿ. ಮಂಗಳೂರಿನ ಪ್ರಮೋದ್ ಸಪ್ರೆ ಅವರ ಸಂಗೀತ , ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್ಚಂದ್ರ ಅವರ ಗಾಯನ ನಾಗರಾಜ, ಟಿ.ಎಂರವರ ಬೆಳಕಿನ ವಿನ್ಯಾಸ ಈ ನಾಟಕದ ವಿಶೇಷವಾಗಿದೆ.

ಈ ದಾಖಲೆಗಳನ್ನು ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸೇರ್ಪಡೆಗೊಂಡಿರುವ ಹೆಮ್ಮೆಯ ವಿಷಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ