
ಬೆಂಗಳೂರು, ಜ.11-ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡವಾರು ಅಂಕ ಹಾಗೂ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡುವುದರಿಂದ ಅಭ್ಯರ್ಥಿಗಳು ಯಾವುದೇ ಶಿಫಾರಸು, ಪ್ರಭಾವ, ಆಮಿಷ ಅಥವಾ ಅವ್ಯವಹಾರಗಳಿಗೆ ಒಳಗಾಗಬಾರದೆಂದು ಎಂದು ಕೆಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.
ನಿನ್ನೆಯಿಂದ ಪ್ರಾರಂಭವಾಗಿರುವ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳ ಮೂಲ ದಾಖಲಾತಿ ಮತ್ತು ದೇಹದಾಢ್ರ್ಯತೆ ಪರಿಶೀಲನೆ ಕಾರ್ಯವನ್ನು ಪರಿವೀಕ್ಷಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸಿಬ್ಬಂದಿಗಳ ಕಾರ್ಯ, ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆ ಮತ್ತು ದೇಹದಾಢ್ರ್ಯತೆ ಪರೀಕ್ಷಿಸುವ ಯಂತ್ರಗಳ ಪರಿಶೀಲನೆಯನ್ನು ಕಳಸದ್ ನಡೆಸಿದರು.
ಒಟ್ಟು 1127 ಹುದ್ದೆಗಳಿಗೆ , 4865 ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಕಾರ್ಯವು ನಿನ್ನೆಯಿಂದ ಪ್ರಾರಂಭವಾಗಿದ್ದು, ಜ.24 ರವರೆಗೆ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ.