ಮೊದಲಬಾರಿಗೆ ರಾಜ್ಯಮಟ್ಟದ ಯುವ ಗಾಯಕ ಸಮ್ಮೇಳಣ

ಬೆಂಗಳೂರು,ಜ.11- ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಜಿಲ್ಲಾ ಹಾಸನದ ಗಮಕ ಕಲಾ ಪರಿಷತ್ ಸಹಯೋಗದಲ್ಲಿ ಇಂದಿನಿದ ಜ.13ರವರೆಗೆ ಮೊತ್ತಮೊದಲ ರಾಜ್ಯಮಟ್ಟದ ಯುವ ಗಮಕ ಸಮ್ಮೇಳನವನ್ನು ಉತ್ತರಬಡಾವಣೆಯ ಸೀತಾರಾಮಾಂಜನೇಯ ದೇವಾಲಯದ ಸಪ್ತಪದಿ ಸೌದಾಮಿನಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಧ್ವಜಾರೋಹಣ ನೆರವೇರಿಸಲಿದ್ದು, ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಆರಕ್ಷಕ ವರಿಷ್ಠಾಧಿಕಾರಿ ಪ್ರಕಾಶ್ ಗೌಡರಿಂದ ಮೆರವಣಿಗೆ ಚಾಲನೆ ದೊರೆತು, 300-350ಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ದೀಪಪ್ರಜ್ಜಾಲನ ಮಾಡುವರು. ಜಿಲ್ಲಾ ಉಸುವಾರಿ ಸಚಿವ ಹೆಚ್.ಡಿ.ರೇವಣ್ಣ ಶುಭಾಶಂಸನಾ ನುಡಿಪ್ರದಾನಮಾಡಲಿದ್ದಾರೆ.ಕರ್ನಾಟಕ ಗಮಕಲಾ ಪರಿಷತ್‍ನ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

13ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ವಿಶ್ರಾಂತ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕರಾಗಿದ್ದ ಕೆ.ವಿ.ರವೀಂದ್ರನಾಥ ಟಾಗೋರ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪರಿಷತ್‍ನ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ