ಚರ್ಮ ರೋಗಗಳಿಗೆ ಸಂಬಂಧಿಸಿದಂತೆ ಉಚಿತ ವೈದ್ಯಕೀಯ ಸಲಹೆ

ಬೆಂಗಳೂರು,ಜ.11-ಕರ್ನಾಟಕ ಯುನಾನಿ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಪ್ರತಿ ಭಾನುವಾರ ಸೋರಿಯಾಸಿಸ್ ಮತ್ತು ಬಿಳಿ ಮಚ್ಚೆಗಳು ಸೇರಿದಂತೆ ಎಲ್ಲಾ ವಿಧವಾದ ಚರ್ಮ ರೋಗಗಳಿಗೆ ಉಚಿತವಾಗಿ ಯೂನಾನಿ ವೈದ್ಯ ಸಲಹೆ ನೀಡಲಾಗುತ್ತಿದೆ.

ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚರ್ಮರೋಗಗಳಿಗೆ ಸಂಬಂಧಿಸಿದಂತೆ ಉಚಿತ ವೈದ್ಯಕೀಯ ಸಲಹೆಗಳನ್ನು ನೀಡಲಾಗುತ್ತಿದೆ.

ಆಸಕ್ತರು, ವಿಳಾಸ: ನಂ.1 4ನೇ ಕ್ರಾಸ್, ಸೋಮೇಶ್ವರನಗರ, ಸಿದ್ದಾಪುರ ಪೊಲೀಸ್ ಸ್ಟೇಷನ್ ರಸ್ತೆ, ನಿಮ್ಹಾನ್ಸ್ ಆಸ್ಪತ್ರೆ ಹಿಂಭಾಗ, ಜೋಡಿ ನರ್ಸರಿ ತೋಟ ಎದುರು, ಬೆಂಗಳೂರು-560011 ಇಲ್ಲಿಗೆ ಬಂದು ತಮಗೆ ಬೇಕಾದ ಸಲಹ ಸೂಚನೆಗಳನ್ನು ಪಡೆಯಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ