ಬೆಂಗಳೂರು,ಜ.11- ಕಲಾದರ್ಶಿನಿ ಟ್ರಸ್ಟ್ ವತಿಯಿಂದ ಇದೇ 27 ಮತ್ತು 29ರಂದು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಸೃಷ್ಟಿ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ.
ರಾಜ್ಯಮಟ್ಟದ ಸ್ಪರ್ಧೆಗಳಾದ ಭರತನಾಟ್ಯ, ಚಿತ್ರಗೀತೆ ಹಾಗೂ ಚಿತ್ರಕಲೆ ಮತ್ತು ಮಕ್ಕಳ ನಾಟಕವನ್ನು ಸುಮಾರು 5 ವರ್ಷಗಳಿಂದ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ದಿವ್ಯಾಂಗಿಗಳನ್ನು ಗುರುತಿಸಿ ಅವರಲ್ಲಿನ ವಿಶೇಷ ಪ್ರತಿಭೆಯನ್ನು ಸಮಾಜಕ್ಕೆ ತಲುಪಿಸುವ ಮಹತ್ಕಾರ್ಯವನ್ನು ಕಲಾದರ್ಶಿನಿ ಟ್ರಸ್ಟ್(ಸೃಷ್ಟಿಕಲಾ ಮಂದಿರ)ಮಾಡುತ್ತಿದೆ.
ಕರ್ನಾಟಕದಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಾಹಿತ್ಯ ಆಸಕ್ತ ಮಕ್ಕಳನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಜ.20ರೊಳಗೆ ನೋಂದಾಯಿಸಿ ಕೊಳ್ಳತಕ್ಕದು.
ಹೊರ ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರುಗಳಿಗೆ ಊಟ ವಸತಿ ಮಾಡಿಕೊಡಲಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕಿ ರೂಪ ಮೋಹನ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊ: 9880882854 ಸಂಪರ್ಕಿಸಲು ಕೋರಲಾಗಿದೆ.