ಬೆಂಗಳೂರು,ಜ.11- ಕರ್ನಾಟ ಪ್ರತಿಭಾವರ್ಧಕ ಅಕಾಡೆಮಿ ವತಿಯಿಂದ ಸಂಕ್ರಾಂತಿ ಸ್ವಾಗತೋತ್ಸವ ಹಾಗೂ ಪ್ರತಿಭೋತ್ಸವದ ಅಂಗವಾಗಿ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜ.14ರಂದು ಸಂಜೆ 6 ಗಂಟೆಗೆ ಎಡಿಎ ರಂಗಮಂದಿರದಲ್ಲಿ ಕರುನಾಡು ಚೇತನ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿದೆ.
ಶ್ರೀ ಓಮಕಾರ ಮಠ ಮಹಾಸಂಸ್ಥಾನದ ಶ್ರೀ ಮಧುಸೂಧನಾನಂದ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಹಾಸಂಸ್ಥಾನ ಮಠ ಶ್ರೀ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ವಹಿಸಲಿದ್ದು, ಡಾ.ಗುರುಶ್ಯಾಮಲ ಜಿ.ಭಾವೆ, ಎ.ಪಂಕಜಪ್ಪಗೆರೆ ತಿಮ್ಮರಾಜು, ಐಎಎಸ್ ಬಿ.ಎಂ.ವಿಜಯಶಂಕರ್ , ಐಪಿಎಸ್ಗಳಾದ ಡಿ.ರೂಪ, , ರವಿ.ಡಿ.ಚನ್ನಣ್ಣ, ವಾಸ ಶ್ರೀನಿವಾಸ್ರಾವ್,ಎಸ್.ಬಿ.ಸಿದ್ದಗಂಗಪ್ಪ ಕೆ.ಟಿ.ನಾಗರಾಜು, ಮನೋಜ್ಕುಮಾರ್, ರವಿಕುಮಾರ್, ಎನ್.ಆರ್. ಜಗದೀಶ್, ಪಿ.ಶ್ರೀನಿವಾಸ್ರಾವ್, ಸಾಹೇಬ್ಗೌಡ ಶೆಟ್ಟಿ, ಕೃಷ್ಣಕುಮಾರ್,ಜೈನ್ ಅಶೋಕ್, ಆನಂದ್, ಎಸ್.ಶಾಂಬಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಎಸ್ಸೆಸ್ಸಲ್ಸಿ , ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಚಿವರಾದ ಡಿ.ಸಿ.ತಮ್ಮಣ್ಣ, ಪ್ರಿಯಾಂಕ ಖರ್ಗೆ, ಬಿಬಿಎಂಪಿ ಮಹಾಪೌರರಾದ ಗಂಗಾಂಬಿಕೆ ಹಾಗೂ ಬೆಂಗಳೂರು ವಿವಿ ಕುಲಪತಿ ಡಾ.ವೇಣುಗೋಪಾಲ್.ಕೆ.ಆರ್ ಅವರು ಪುರಸ್ಕರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸಮವಸ್ತ್ರ ಹಾಗೂ ನೃತ್ಯ ಪ್ರತಿಭೆಗಳಿಗೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಎಸ್.ರೆಡ್ಡಿ, ಕೆಪಿಸಿಸಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಅಭಿನಂದಿತರಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಲಕ್ಷ್ಮಣ್, ಟೆಲಿಕಾಂ ಗೃಹ ನಿರ್ಮಾಣ ಸಹಾಕರ ಸಂಘದ ಅಧ್ಯಕ್ಷ ಡಾ.ಜಿ.ಬಾಬು ಉಪಸ್ಥಿತರಿರುವರು.