
ಬೆಂಗಳೂರು, ಜ.11-ವೆಂಚರ್ಸ್ ಕಂಪೆನಿಯ ಹೆಸರಿನಲ್ಲಿ ಪಾಂಜಿ ಸ್ಕೀಮ್ ನಡೆಸುತ್ತಾ ಗ್ರಾಹಕರಿಗೆ ವಂಚಿಸುತ್ತಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಯೂಬ್ ಅಲಿ (41), ಇಲಿಯಾಸ್ ಪಾಷ(40), ಮೊಹಮ್ಮದ್ ಮುಜಾಹಿದ್ದುಲ್ಲಾ (41), ಮುದಾಸಿರ್ ಪಾಷ (35) ಮತ್ತು ಮೊಹಮದ್ ಶಾಹೀದ್ (35) ಬಂಧಿತರು.
ಜಯನಗರ 9ನೇ ಬ್ಲಾಕ್ನಲ್ಲಿರುವ ಎಐಎಂಎಂಎಸ್ ವೆಂಚರ್ಸ್ ಕಂಪೆನಿಯು ಹಣವನ್ನು ಹೂಡಿಕೆ ಮಾಡಿದರೆ ಶೇ.3ರಿಂದ 500 ಮಂದಿ ಗ್ರಾಹಕರಿಂದ ಸುಮಾರು 65 ಕೋಟಿ ಹಣವನ್ನು ಹೂಡಿಕೆ ಮಾಡಿಕೊಂಡಿದೆ.
ಪ್ರಾರಂಭದ ದಿನಗಳಲ್ಲಿ ಗ್ರಾಹಕರಿಗೆ ಲಾಭಾಂಶವನ್ನು ನೀಡಿ ನಂತರ ಯಾವುದೇ ಲಾಭಾಂಶ ಹಾಗೂ ಅಸಲು ಹಣವನ್ನು ನೀಡದೆ ಬಂದಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಂಪೆನಿ ಮೇಲೆ ದಾಳಿ ಮಾಡಿ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ತನಿಖೆಯನ್ನು ಮುಂದುವರಿಸಲಾಗಿದೆ.