ನಾಳೆ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಘಟಿಕೋತ್ಸವ

ಬೆಂಗಳೂರು, ಜ.11- ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಘಟಿಕೋತ್ಸವವು ಆನೇಕಲ್‍ನ ಪ್ರಶಾಂತಿ ಕುಟೀರದ ಸಂಸ್ಕøತಿ ಭವನದಲ್ಲಿ ನಾಳೆ (ಜ.12) ನಡೆಯಲಿದೆ ಎಂದು ಕುಲಾಧಿಪತಿ ಡಾ.ಎಚ್.ಆರ್.ನಾಗೇಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀತಿ ಆಯೋಗದ ಅಧ್ಯಕ್ಷ ರಾಜೀವ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಜ್ಯೂರಿಚ್‍ನ ನೊಬೆಲ್ ಸಸ್ಟೆನೆಬಲ್ ಟ್ರಸ್ಟ್‍ನ ಅಧ್ಯಕ್ಷ ಸ್ವೆನ್ ಮೈಕಲ ನೊಬೆಲ್, ಅಮೇರಿಕಾದ ಜೈಪುರ್ ಪುಡ್ ಸಂಸ್ಥೆಯ ಅಧ್ಯಕ್ಷ ಪ್ರೇಮ್ ಭಂಡಾರಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ನಮ್ಮ ಸಂಸ್ಥಾನವು ರಾಷ್ಟ್ರದಲ್ಲಿಯೇ ಅಗ್ರಮಾನ್ಯ ಯೋಗ ವಿಶ್ವವಿದ್ಯಾಲಯವಾಗಿದೆ.ಯೋಗ ಶಿಕ್ಷಣ ಹಾಗೂ ಸಂಶೋಧನೆಗಳಿಗಾಗಿ ತಮ್ಮನ್ನು ಅರ್ಪಿಸಿಕೊಂಡಿರುತ್ತದೆ. ರಾಷ್ಟ್ರದ ಮೂಲೆ ಮೂಲೆಗಳಲ್ಲಿ ಯೋಗ ಶಿಕ್ಷಣ ನೀಡಲು ನಮ್ಮ ಸಂಸ್ಥಾನ ಪದವಿ ಪೂರ್ವ ಶಿಕ್ಷಣ ದಿಂದ ಸ್ನಾತಕೋತ್ತರದವರೆಗೆ ನೇರ ಶಿಕ್ಷಣ, ದೂರ ಶಿಕ್ಷಣ ಮತ್ತು ಡಿಜಿಟಲï ಮಸದರಿ ಕಲಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ