
ಬೆಂಗಳೂರು,ಜ.10- ಕಳೆದ ಜ.3ರಂದು ಯಶ್ ಅವರ ನಿವಾಸ ಹಾಗೂ ಮಾವನ ಮನೆಯಲ್ಲೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಹಲವು ಆಸ್ತಿ ದಾಖಲೆಗಳು ಮತ್ತು ಮದುವೆ ಸಂದರ್ಭದಲ್ಲಿ ಬಂದಿರುವಂತಹ ಉಡುಗೊರೆಗಳ ಬಗ್ಗೆ ಮಹಿತಿ ಕೇಳಿ ನೋಟಿಸ್ ನೀಡಲಾಗಿತ್ತು.
ಇಂದು ಇದರ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಯಶ್ ಅವರು ಕ್ವೀನ್ಸ್ ರಸ್ತೆಯಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಗೆ ಹಾಜರಾಗಿದ್ದು, ಚಿತ್ರರಂಗದಲ್ಲಿ ನಟನೆಗಾಗಿ ಪಡೆಯುವ ಸಂಭಾವನೆ ಹಾಗೂ ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಚರಾಸ್ಥಿಸ್ತಿಗಳ ಬಗ್ಗೆ ದಾಖಲೆಗಳನ್ನು ಕೂಡ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.