ಸಮಾಜವು ಇಂದು ಕಲುಷಿತಗೊಂಡಿದೆ; ಗೊ.ರು.ಚನ್ನಬಸಪ್ಪ

ಬೆಂಗಳೂರು, ಜ.10- ಇಂದು ಸಮಾಜದಲ್ಲಿ ನಡೆಯುತ್ತಿರುವ ಕೊಲೆ,ಸುಲಿಗೆ, ವಂಚನೆ, ಸ್ವಾರ್ಥಗಳಿಂದ ಸಮಾಜವು ಕಲುಷಿತವಾಗಿದೆ,ಇದೇ ಮುಂದುವರಿದರೆ ಭವಿಷ್ಯವಿಲ್ಲವೆನಿಸುತ್ತದೆ.ಆದ್ದರಿಂದ ನಾಳಿನ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಹೊಣೆ ನಮ್ಮದಾಗಿದೆ ಎಂದು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.

ವಚನ ಜ್ಯೋತಿ ಬಳಗ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಮಕ್ಕಳ ವಚನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳದ್ದು ನಿರ್ಮಲ ಮನಸ್ಸು.ಅವರಲ್ಲಿ ವಚನ ಸಂಸ್ಕøತಿಯ ಬೀಜ ಬಿತ್ತಿದರೆ ಮುಂದೆ ಸ್ವಾಸ್ಥ್ಯ-ಸುಸಂಸ್ಕøತ ಸಮಾಜ ಕಾಣಲು ಸಾಧ್ಯ ಎಂದರು.
ಶಾಲೆಯಲ್ಲಿ ಜೀವನ ವಿಧಾನವನ್ನು ಕಲಿಸಲಾಗುತ್ತದೆ.ಆದರೆ, ಜೀವನ ಸಂಸ್ಕøತಿ ಕಲಿಸುವಂತಾಗಬೇಕು.ವಚನ ಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಅವರು ಸಾಹಸ, ಸಂಘಟನೆ ಹಾಗೂ ಸಮರ್ಪಣಾ ಭಾವದಿಂದ ಮಕ್ಕಳ ವಚನ ಮೇಳ ಆಯೋಜಿಸಿದ್ದಾರೆ.ಇದು ಸ್ವಾಗತಾರ್ಹ ಎಂದು ಗೊ.ರು.ಚ. ಹೇಳಿದರು.

ಪಿನಾಕಪಾಣಿ ಮಾತನಾಡಿ, ವಚನ ಸಂಸ್ಕøತಿಯನ್ನು ತಲುಪಿಸುವುದರ ಮೂಲಕ ಕನ್ನಡ ಭಾಷೆಯ ಹಿರಿಮೆ ಪರಿಚಯಿಸಲಾಗುತ್ತಿದೆ.ವಚನ ಪ್ರಕಾರದ ಹನ್ನೆರಡು ಸ್ಪರ್ಧೆಗಳಲ್ಲಿ ಅಂಗನವಾಡಿಯಿಂದ ಹತ್ತನೆ ತರಗತಿಯವರೆಗೆ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರು.
ಶರಣ ಸೇವಾ ಸಮಾಜದ ಅಧ್ಯಕ್ಷ ಎಂ.ಎಸ್.ನಟರಾಜ, ವಚನ ಜ್ಯೋತಿ ಬಳಗದ ಕಾರ್ಯಾಧ್ಯಕ್ಷ ಗುರುಪ್ರಸಾದ್ ಉಚ್ಚಂಗಿ ಉಪಸ್ಥಿತರಿದ್ದರು.
ಕನ್ನಡ ಪ್ರಾಧ್ಯಾಪಕ ಡಾ.ರುದ್ರೇಶ್ ಅದರಂಗಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಬೆಂಗಳೂರಿನ ವಿವಿಧ ಶಾಲೆಗಳಿಂದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ