ರಾಜಧಾನಿಯಲ್ಲಿ ಏರಿಕೆಯಾದ ತರಕಾರಿಗಳ ಬೆಲೆ

ಬೆಂಗಳೂರು, ಜ.10- ರಾಜಧಾನಿಯಲ್ಲಿ ತರಕಾರಿಗಳ ಬೆಲೆ ದಿಢೀರ್ ಎಂದು ಏರಿಕೆಯಾಗಿದೆ.

10 ರಿಂದ 20ರೂ.ಗೆ ಸಿಗುತ್ತಿದ್ದ ಟೊಮ್ಯಾಟೋ ಈಗ 50 ರಿಂದ 70ರೂ.ದಾಟಿದೆ. ಮಾರುಕಟ್ಟೆಗೆ ಉತ್ತಮ ಟೊಮ್ಯಾಟೋ ಬರುತ್ತಿಲ್ಲ. ಬರುತ್ತಿರುವ ಟೊಮ್ಯಾಟೋ ಬೆಲೆ ಗಗನಮುಖಿಯಾಗಿದೆ.ಕಳೆದ ಮೂರ್ನಾಲ್ಕು ದಿನಗಳಿಂದ ಟೊಮ್ಯಾಟೋ ಸಿಗದೆ ಜನ ಪರದಾಡುತ್ತಿದ್ದಾರೆ.ರೈತಾಪಿ ವರ್ಗದವರಿಗೆ ಬಂಪರ್ ಬೆಲೆ ಸಿಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.ಆದರೆ, ಫಸಲು ಕೂಡ ಸರಿಯಾಗಿ ಇಲ್ಲ. ಸಾಕಷ್ಟು ಚಳಿ ಇರುವುದರಿಂದ ಟೊಮ್ಯಾಟೋ ಗಿಡದಲ್ಲಿ ಸರಿಯಾಗಿ ಬೆಳೆ ಬರುತ್ತಿಲ್ಲ.

ಅದೇನೇ ಇರಲಿ ಬೆಲೆ ಏರಿಕೆ ಬರೆ ಮಾತ್ರ ಜನರನ್ನು ತಟ್ಟುತ್ತಿದೆ.ಇದಿಷ್ಟೇ ಅಲ್ಲ, ಇನ್ನಿತರ ತರಕಾರಿಗಳ ಬೆಲೆಯೂ ಕೂಡ ಏರಿಕೆಯಾಗಿದೆ. ಬೀನ್ಸ್ 50 ರಿಂದ 60ರೂ., ಕ್ಯಾರೆಟ್ 40 ರಿಂದ 50ರೂ., ಅವರೆಕಾಯಿ 50ರೂ., ಬೆಂಡೆಕಾಯಿ 80ರೂ., ಶುಂಠಿ 140 ರಿಂದ 160ರೂ., ನುಗ್ಗೆಕಾಯಿ 120 ರಿಂದ 150ರೂ., ಬಟಾಣಿ 40 ರಿಂದ 50ರೂ. ಒಟ್ಟಾರೆ ಕಳೆದ ಒಂದು ತಿಂಗಳಿಂದ ಸುಲಭವಾಗಿ ಸಿಗುತ್ತಿದ್ದ ತರಕಾರಿಗಳ ಬೆಲೆ ಈಗ ಏರಿಕೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ