ದರೋಡೆಕೋರರು ಎರಡು ರೈಲುಗಳ ಮೇಲೆ ದಾಳಿ ನಡೆಸಿ 28 ಲಕ್ಷ ರೂ. ಹಣ ಮತ್ತು ಆಭರಣ ಲೂಟಿ ಮಾಡಿ ಪರಾರಿ

ನವದೆಹಲಿ, ಜ.10- ಶಸ್ತ್ರಸಜ್ಜಿತ ದರೋಡೆಕೋರರು ನಿನ್ನೆ ರಾತ್ರಿ ಬಿಹಾರ ಮತ್ತು ಪಶ್ಚಿಮ ಬಂಗಾಳದ ಎರಡು ರೈಲುಗಳ ಮೇಲೆ ದಾಳಿ ನಡೆಸಿದ ಒಟ್ಟು 28 ಲಕ್ಷ ರೂ.ಗಳ ಹಣ ಮತ್ತು ಆಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಬಿಹಾರದ ಲಕ್ಕಿಸರೈ ಜಿಲ್ಲೆಯ ರೈಲೊಂದರ ಮೇಲೆ ನಿನ್ನೆ ತಡರಾತ್ರಿ ದಾಳಿ ನಡೆಸಿದ ಶಸ್ತ್ರಸಜ್ಜಿತ ದರೋಡೆಕೋರರು ಪ್ರಯಾಣಿಕರನ್ನು ಬೆದರಿಸಿ ಹಣ, ಚಿನ್ನಾಭರಣ ಮತ್ತು ಮೊಬೈಲ್‍ಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಕರ್ಜಾ ಜಿಲ್ಲೆಯ ಬಳಿ ಬಳಿ ಈ ಘಟನೆ ನಡೆದಿದೆ.

ಮತ್ತೊಂದ ರೈಲು ದರೋಡೆ:
ಗುಂಪೊಂದು ದೆಹಲಿ-ಭಾಗಲ್ಪುರ್ ಎಕ್ಸ್‍ಪ್ರೆಸ್ ಮೇಲೆ ದಾಳಿ ನಡೆಸಿ ಪ್ರಯಾಣಿಕರಿಂದ ಸುಮಾರು 3 ಲಕ್ಷ ರೂ.ಗಳನ್ನು ಲೂಟಿ ಮಾಡಿರುವ ಘಟನೆ ನಿನ್ನೆ ರಾತ್ರಿ ಪಶ್ಚಿಮ ಬಂಗಾಳದ ಮಾಲ್ಡಾ ಬಳಿ ನಡೆದಿದೆ.

ಮಾಲ್ಡಾ ವಲಯದ ಕಿಯುಲ್ ಮತ್ತು ಜಮಾಲ್‍ಪುರ್ ವಿಭಾಗಗಳ ನಡುವೆ ಧನೌರಿ ನಿಲ್ದಾಣದ ಬಳಿ ದರೋಡೆಕೋರರು ರೈಲು ಅಲಾರಾಂ ಚೈನ್ (ನಿಲುಗಡೆ ಸರಪಳಿ) ಎಳೆದು ರೈಲನ್ನು ನಿಲ್ಲಿಸಿದರು. ನಂತರ ಮಾರಕಾಸ್ತ್ರಗಳಿಂದ ಪ್ರಯಾಣಿಕರನ್ನು ಬೆದರಿಸಿ ನಗ-ನಾಣ್ಯ ಲೂಟಿ ಮಾಡಿ ಪರಾರಿಯಾದರು ಎಂದು ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸಂಬಂಧ ದರೋಡೆಗೆ ಒಳಗಾದ 10 ಪ್ರಯಾಣಿಕರು ಜಮಾಲ್‍ಪುರ್‍ನ ಸರ್ಕಾರಿ ರೈಲ್ವೆ ಪೊಲೀಸ್(ಜಿಆರ್‍ಪಿ) ವಿಭಾಗಕ್ಕೆ ದೂರು ನೀಡಿದ್ದಾರೆ.

ಸುಮಾರು 3 ಲಕ್ಷ ರೂ.ಗಳಷ್ಟು ಮೌಲ್ಯದ ವಸ್ತುಗಳನ್ನು ದರೋಡೆಕೋರರು ಲೂಟಿ ಮಾಡಿದ್ದಾರೆ. ಅವರ ಕೈಯಲ್ಲಿ ನಾಡ ಪಿಸ್ತೂಲ್‍ಗಳು ಇದ್ದವು. ಅವರು ಗುಂಡು ಹಾರಿಸಿಲ್ಲ ಮತ್ತು ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ