
ಬೆಂಗಳೂರು,ಜ.10-ಮನು ಅಲಿಯಾಸ್ ಸಿಡಿ ಮನು ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸುವಂತೆ ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಅವರಿಗೆ ಶಾಸಕ ಅಶ್ವತ್ಥ್ ನಾರಾಯಣ ನೇತೃತ್ವದ ನಿಯೋಗ ದೂರು ನೀಡಿದೆ.
ಮನು ಹತ್ಯೆ ಮರ್ಯಾದಾ ಹತ್ಯೆ ಎನ್ನುವುದರಲ್ಲಿ ಸಂದೇಹವಿಲ್ಲ. ಶಾಸಕ ಗೋಪಾಲಯ್ಯ ತಮ್ಮನ ಪುತ್ರಿ ಪಲ್ಲವಿಯೊಂದಿಗೆ ಮನು ಮದುವೆಯಾಗಿದ್ದರು.
ಕೊಲೆ ಬೆದರಿಕೆ ಇದೆ ಎಂದು ಮನು ಆತಂಕ ವ್ಯಕ್ತಪಡಿಸಿ ಫೇಸ್ಬುಕ್ನಲ್ಲಿ ವಿಡಿಯೋ ಸಹ ಹಾಕಿದ್ದರು.ಜೀವ ಬೆದರಿಕೆ ಇದೆ ಎಂದು ಗೊತ್ತಿದ್ದರೂ ಪೆÇಲೀಸ್ ರಕ್ಷಣೆ ನೀಡಿಲ್ಲದಿರುವುದು ರಾಜಕೀಯ ಕಾರಣವಾಗಿದೆ.ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ನಿಯೋಗ ಮನವಿ ಮಾಡಿದೆ.