ಬೆಂಗಳೂರು,ಜ.9-ರಾಜಾಜಿನಗರ ಸಮಾಜ ಸೇವಾ ಸಂಘದ ವತಿಯಿಂದ ಜನವರಿ 11ರಂದು ಬುದ್ದಿಮಾಂಧ್ಯ ಮಕ್ಕಳಿಗಾಗಿ ವಿಶೇಷ ಕ್ರೀಡಾಕೂಟವನ್ನು ಆಯೋಜಿಸಲಿದೆ.
ಇದು 23ನೇ ವಾರ್ಷಿಕ ಕ್ರೀಡಾಕೂಟವಾಗಿದ್ದು, ಈ ಕ್ರೀಡಾಕೂಟಕ್ಕೆ ಬೆಂಗಳೂರು ಮಹಾನಗರದ ಸುತ್ತಮುತ್ತಲಿನ 26ಕ್ಕೂ ಹೆಚ್ಚು ಶಾಲೆಗಳ 800ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳಲಿದ್ದಾರೆ.
ಕ್ರೀಡಾಕೂಟವು ರಾಜಾಜಿನಗರ 4ನೇ ವಿಭಾಗದಲ್ಲಿನ ಶ್ರೀರಾಮಮಂದಿರ ಆಟದ ಮೈದಾನದಲ್ಲಿ ಜ.11ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಡೆಯಲಿದೆ.
ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮಕ್ಕಳಿಗಗಿ ಪೌಷ್ಟಿಕಾಂಶವುಳ್ಳ ಉತ್ತಮ ಅಹಾರ, ಆರೋಗ್ಯವರ್ಧಕ ಪಾನೀಯ, ತಿಂಡಿ-ತಿಇಸು, ಹಣ್ಣು ಹಂಪಲು ಹಾಗೂ ಉಚಿತ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಸಂಘದ ವತಿಯಿಂದ ಒದಗಿಸಲಾಗುವುದು.
ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೂ ಉತ್ತಮ ಉಡುಗೊರೆಗಳನ್ನು ನೀಡಿ ಗೌರವಿಸಲಾಗುತ್ತದೆ.
ಕ್ರೀಡಾ ವಿವರಗಳು:
ಓಟದ ಸ್ಪರ್ಧೆ, ಫೋಟೆಟೊ ರೇಸ್, ಶಾಟ್ಪುಟ್, ಮ್ಯೂಸಿಕಲ್ ಛೇರ್, ಬಲ್ ಇನ್ ದ ಬಕೆಟ್, ಸ್ಲೊ ವಾಕ್ ಸ್ಪರ್ಧೆ.
ಈ ಕ್ರೀಡಾಕೂಟದಲ್ಲಿ ಗಣ್ಯ ವ್ಯಕ್ತಿಗಳು, ಹಿರಿಯ ವ್ಯಕ್ತಿಗಳು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಸಚಿವರು ಭಾಗವಹಿಸುತ್ತಿದ್ದಾರೆ. ಸ್ನೇಹಿತರು ಮತ್ತು ಹಿತೈಷಿಗಳ ಬೆಂಬಲ ಮತ್ತು ಸಹಕಾರದಿಂದ ಈ ಕ್ರೀಡಾಕೂಟವನ್ನು ಕಳೆದ 22 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.