
ನವದೆಹಲಿ: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಗೆ ಶೇಕಡ 10ರಷ್ಟು ಮೀಸಲಾತಿ ನೀಡಿವ ಕೇಂದ್ರ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದ್ದು, ಇಂದು ಈ ಮಸೂದೆ ರಾಜ್ಯ ಸಭೆಯಲ್ಲಿ ಮಸೂದೆ ಪರೀಕ್ಷೆ ಎದುರಿಸಲಿದೆ.
ಮಂಗಳವಾರ ಲೋಕಸಭೆಯಲ್ಲಿ ಮಂಡನೆಯಾದ ಮಸೂದೆಗೆ ಪರ ವಿರೋಧ ಚರ್ಚೆ ಬಳಿಕ ವಿಪಕ್ಷಗಳು ಕೂಡ ಒಮ್ಮತ ಸೂಚಿಸಿದ್ದವು. ಮೂರು ವಿರೋಧ ಮತಗಳು ಚಲಾಯಿಸಿದರು, 323 ಮತಗಳಿಂದ ಒಮ್ಮತ ಸಿಕ್ಕಿ ಲೋಕಸಭೆಯಲ್ಲಿ ಮಸೂದೆ ಪಾಸ್ ಆಗಿದೆ.
ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದ್ದು, ಅಲ್ಲಿ ನಿಜವಾದ ಪರೀಕ್ಷೆ ಎದುರಾಗಲಿದೆ. ಕಾರಣ ಆಡಳಿತ ಪಕ್ಷ ಇಲ್ಲಿ ಬಹುಮತ ಹೊಂದಿಲ್ಲದೆ ಇರುವುದು. ಅಲ್ಲದೇ, ಇಲ್ಲಿ ಪ್ರತಿಪಕ್ಷಗಳು ಮಸೂದೆಗೆ ಬೆಂಬಲ ಸೂಚಿಸಿದರೆ ಮಾತ್ರ ಈ ಮಸೂದೆಗೆ ಅಂಗೀಕಾರವಾಗಲಿದೆ.
ಲೋಕಸಭೆಯಲ್ಲಿ ಸಂವಿಧಾನದ (124ನೇ ತಿದ್ದುಪಡಿ) 2019 ಮಸೂದೆಯಲ್ಲಿ ವಿಪಕ್ಷಗಳು ಬೆಂಬಲಿಸಿದೆ. ಮಸೂದೆ ಅಂಗೀಕಾರವಾದ ಬಳಿಕವೂ ಕಾನೂನನ್ನು ರಚಿಸಿ ನಂತರ ಇದನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗುವುದ ಕಾರಣ ಇದನ್ನು ಸಂವಿಧಾನ ತಿದ್ದುಪಡಿ ಮೂಲಕ ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.