ಹೊಸದಿಲ್ಲಿ: 12ನೇ ಆವೃತ್ತಿಯ ಶ್ರೀಮಂತರ ಕ್ರಿಕೆಟ್ ಟೂರ್ನಿ ಐಪಿಎಲ್ ಟೂರ್ನಿ ಮಾರ್ಚ್ 23 ರಿಂದ ಅದ್ದೂರಿಯಾಗಿ ಆರಂಭವಾಗಲಿದೆ. ಈ ಬಾರಿಯೂ ಭಾರತದಲ್ಲಿಯೇ ನಡೆಯಲಿದೆ ಅನ್ನೋದು ಮತ್ತೊಂದು ವಿಶೇಷ.
ಈ ಬಾರಿ ಸಾರ್ವತ್ರಿಕ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ದುಬೈ ಅಥವಾ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಭಾರತದಲ್ಲೆ ಐಪಿಎಲ್ ನಡೆಯಲಿದೆ ಅನ್ನೋದನ್ನ ಐಪಿಎಲ್ ಮಂಡಳಿ ತನ್ನ ಅದಿಕೃತ ಟ್ವಿಟರ್ನಲ್ಲಿ ಹೇಳಿಕೊಂಡಿದೆ. ಆದರೆ ಟೂರ್ನಿಯ ವೇಳಾಪಟ್ಟಿ ಇನ್ನು ಪ್ರಕಟಗೊಂಡಿಲ್ಲ.
ಐತಿಹಾಸಿಕ ಸರಣಿ ಗೆದ್ದ ಟೀಂಇಂಡಿಯಾಕ್ಕೆ ಬಿಸಿಸಿಐ ಭರ್ಜರಿ ಗಿಫ್ಟ್
ಆಸಿಸ್ ನಾಡಲ್ಲಿ ಚೊಚ್ಚಲ ಐತಿಹಾಸಿಕ ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಅಭಿನಂದಿಸಿದ್ದು ಭರ್ಜರಿ ಗೆಲುವಿನ ಉಡುಗೊರೆ ನೀಡಿದೆ.
ಸೋಮವಾರ ಸಿಡ್ನಿ ಟೆಸ್ಟ್ ಪಂದ್ಯವನ್ನ ಡ್ರಾ ಮಾಡಿಕೊಳ್ಳುವ ಮೂಲಕ ಕೊಹ್ಲಿ ಪಡೆ ೨-೧ ಅಂತರದಿಂದ ಸರಣಿಯನ್ನ ಕೈ ವಶ ಮಾಡಿಕೊಂಡು ಕಾಂಗರೂ ನಾಡಲ್ಲಿ ೭೨ ವರ್ಷಗಳ ಬಳಿಕ ಚೊಚ್ಚಲ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದುಕೊಂಡು ಸಾಧನೆ ಮಾಡಿತು.
ಆಸಿಸ್ ವಿರುದ್ಧ ಆಡುವ ಹನ್ನೊಂದರ ಬಳಗದಲ್ಲಿ ಆಡಿದ ಆಟಗಾರರಿಗೆ ತಲಾ ೧೫ ಲಕ್ಷ ರೂಪಾಯಿ ಬಹುಮಾನ ಮತ್ತು ಖಾಯಂ ಆಟಗಾರರಿಗೆ ೭.೫ ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ತಂಡದ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಸಹಾಯಕ ಕೋಚ್ಗಳಿಗೆ ೨೫ ಲಕ್ಷರೂಪಾಯಿ ಬಹುಮಾನ ಘಷಿಸಿದೆ.