ದೇವಾಲಯದಲ್ಲಿ ಕಳ್ಳತನ ಮಾಡಿ ಬೆಲೆಬಾಳುವ ವಸ್ತುಗಳನ್ನು ಮೂಟೆಯಲ್ಲಿ ತುಂಬಿ ಸಾಗಿಸುವಾಗ ಪೊಲೀಸರನ್ನು ನೋಡಿ ಅಲ್ಲಿಯೇ ಮೂಟೆಯನ್ನು ಬಿಟ್ಟುಹೋದ ಕಳ್ಳರು

ಬೆಂಗಳೂರು,ಜ.9- ದೇವಾಲಯಕ್ಕೆ ನುಗ್ಗಿ ಹುಂಡಿ ಒಡೆದು ಬೆಳ್ಳಿ ಇತರ ವಸ್ತುಗಳನ್ನು ಮೂಟೆಗೆ ತುಂಬಿಕೊಂಡು ಪರಾರಿಯಾಗುತ್ತಿದ್ದ ಕಳ್ಳರು  ಪೊಲೀಸರನ್ನು ಕಂಡು ಮೂಟೆಯನ್ನು ಅಲ್ಲಿಯೇ ಬಿಟ್ಟು  ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗೋವಿಂದರಾಜನಗರ ಪಟ್ಟೇಗಾರನಪಾಳ್ಯದ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿರುವ ಶ್ರೀ ಮಾರುತಿ ದೇವಾಲಯದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ.
ರಾತ್ರಿ 2 ಗಂಟೆ ಸುಮಾರಿನಲ್ಲಿ ದೇವಾಲಯದ ಕಿಟಕಿ ಗಾಜು ಒಡೆದು ಕಬ್ಬಿಣದ ಸರಳು ಮುರಿದು ಕಳ್ಳರು ಒಳನುಗ್ಗಿದ್ದಾರೆ. ಎಲ್ಲ ದೋಚಿ ಇನ್ನೇನು ಪರಾರಿಯಾಗುವಾಗ ಗಸ್ತಿನಲ್ಲಿದ್ದ ಪೊಲೀಸರು ಎದುರಾಗಿದ್ದಾರೆ. ನಂತರ ಹೊಯ್ಸಳ ವಾಹನವೂ ಬಂದಿದೆ. ಅಪಾಯ ಅರಿತು ಕಳ್ಳರು ಅಲ್ಲಿಂದ   ಬೆಳ್ಳಿ ವಸ್ತುಗಳನ್ನು ತುಂಬಿದ್ದ ಮೂಟೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ